ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ನಿರ್ವಹಣಾ ಅಧ್ಯಯನ ವಿಭಾಗದಿಂದ'ಸಂಸ್ಕøತಿಯ ಮೂಲಕ ಸಮೃದ್ಧಿ-ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಾಂಸ್ಕೃತಿಕ ಪ್ರವಾಸೋದ್ಯಮ- ಪರಿವರ್ತನಾಶೀಲ ವ್ಯವಹಾರ ತಂತ್ರಗಳು' ಎಂಬ ಯೋಜನಾ ವಿಷಯಕ್ಕೆ ಸಂಬಂಧಿಸಿ ರಾಷ್ಟ್ರೀಯ ವಿಚಾರ ಸಂಕಿರಣ ಕಾಲೇಜು ಕ್ಯಾಂಪಸ್‍ನಲ್ಲಿ ಜರುಗಿತು.
ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಸಹಯೋಗದೊಂದಿಗೆ ಆಯೋಜಿಸಲಾದ ಈ ವಿಚಾರ ಸಂಕಿರಣವನ್ನು ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಉದ್ಘಾಟಿಸಿ ಮಾತನಾಡಿ, ಭಾರತದ ಸಂಸ್ಕøತಿ, ಇತರ ದೇಶಗಳಿಗಿಂತ ವಿಭಿನ್ನವಾಗಿ ಗುರುತಿಸುವಂತೆ ಮಾಡಿದ್ದು, ಇದು ಕಾಲಕ್ಕೆ ತಕ್ಕಂತೆ ನಿರಂತರವಾಗಿ ಅಭಿವೃದ್ಧಿಹೊಂದುತ್ತಿದೆ. ಪ್ರತಿರಾಜ್ಯ ತನ್ನದೇ ಆದ ಸಾಂಸ್ಕøತಿಕ ವೈವಿಧ್ಯತೆಯನ್ನು ಹೊಂದಿದ್ದು, ಈ ಎಲ್ಲಾ ವೈವಿಧ್ಯತೆಯನ್ನು ಮೈಗೂಡಿಸಿಕೊಂಡು, ಒಟ್ಟಾಗಿ ಮುಂದುವರಿಯುವಲ್ಲಿ ಭಾರತ ಮುಮಚೂನಿಯಲ್ಲಿರುವುದಾಗಿ ತಿಳಿಸಿದರು.
ಪಾಂಡಿಚೇರಿ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ವೈ. ವೆಂಕಟ ರಾವ್ ಮುಖ್ಯ ಭಾಷಣ ಮಾಡಿದರು. ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‍ನ ಡೀನ್ ಪೆÇ್ರ. ಟಿ.ಜಿ. ಸಾಜಿ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಪೆÇ್ರ. ಜೋಸೆಫ್‍ಕೊಯಿಪಲ್ಲಿ ಉಪಸ್ಥಿತರಿದ್ದರು. ನಿರ್ವಹಣಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಅರವಿಂದ್ ಆರ್. ಗಜಘೋಷ್ ಸ್ವಾಗತಿಸಿದರು. ವಿಚಾರ ಸಂಕಿರಣ ಸಂಚಾಲಕ ಡಾ. ಎಂ. ಜಾನ್‍ಪಾಲ್ ವಂದಿಸಿದರು.
ವಿಜಯಕುಮಾರ್, ಡಾ. ಲಿಂಗಮೂರ್ತಿ (ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ) ಮತ್ತು ಡಾ. ಶರಣಕುಮಾರ್ ಶೆಟ್ಟಿ (ಎಜೆಐಎಂ ಬೆಂಗಳೂರು) ವಿವಿಧ ಅಧಿವೇಶನಗಳ ನೇತೃತ್ವ ವಹಿಸಿ ವಿಚಾರ ಮಂಡಿಸಿದರು.





