ಕಾಸರಗೋಡು: ನಗರದ ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೆಳಗ್ಗೆ ಧ್ವಜಾರೋಹಣದೊಂದಿದಗೆ ಕಾರ್ಯಕ್ರಮ ಆರಂಭಗೊಮಡಿತು.ಅಭಯನಿಕೇತನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣಪತಿ ಹೋಮ, ಓಂಕಾರ, ಸುಪ್ರಭಾತಂ, ನಾಗರ ಸಂಗೀತ, ಗಣಪತಿ ಹೋಮ, ಶ್ರೀ ಸಾಯಿ ಸಹಸ್ರ ನಾಮಾರ್ಚನೆ, ಶ್ರೀ ಸತ್ಯನಾರಾಯಣ ಪೂಜೆ, ನಾರಾಯಣ ಸೇವೆ ಜರುಗಿತು.
ಅಭಯನಿಕೇತನ ಕಾರ್ಯಕರ್ತರಿಂದ ಭಜನೆ, ಲಲಿತಾ ಸಹಸ್ರ ನಾಮ ಪಠಣ ಜರುಗಿತು. ಅಭಯನಿಕೇತನದ ಸಾಮಾಜಿಕ ಸೇವಾಕಾರ್ಯಗಳ ಅಂಗವಾಗಿ ಅಸೌಖ್ಯಪೀಡಿತರಿಗೆ ಗಾಲಿಕುರ್ಚಿಗಳ ವಿತರಣೆ, ಉಯ್ಯಾಲೆ ಉತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.




