ಕಾಸರಗೋಡು : ಗಡಿನಾಡಿನ ಕನ್ನಡಿಗರ ಭಾಂದವ್ಯವು ಪರಸ್ಪರ ಚಿರಕಾಲದ ಅನುಬಂಧವಾಗಬೇಕು. ನಮ್ಮ ಮಕ್ಕಳಿಗೆ ಅಂಕ ಶಿಕ್ಷಣದ ಜತೆಗೆ ಕನ್ನಡ ಸಂಸ್ಕøತಿಯ ಶಿಕ್ಷಣವನ್ನೂ ನೀಡಬೇಕು. ಕನ್ನಡ ಭಾಷೆಯ ಬಳಕೆ ಹೆಚ್ಚಾದಾಗ ಭಾಷೆಯು ಸ್ವಯಂ ಜಾಗೃತಿಯಾಗಿ ಬೆಳೆಯುತ್ತದೆ' ಎಂದು ಕೋಲಾರದ ರಂಗ ಇಂಚರ ಟ್ರಸ್ಟಿನ ಅಧ್ಯಕ್ಷ ಡಾ. ಇಂಚರ ನಾರಾಯಣ ಸ್ವಾಮಿ ಹೇಳಿದರು.
ಅವರು ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಶನಿವಾರ ಕಾಸರಗೋಡಿನ ಕನ್ನಡ ಭವನ, ಕನ್ನಡ ಭವನ ಪ್ರಕಾಶನ ಮತ್ತು ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಆಶ್ರಯದಲ್ಲಿ ನಡೆದ ಕೋಲಾರ - ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ ಸಂಭ್ರಮ-2025' ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿದರು.
ಕಾರ್ಯಕ್ರಮವನ್ನು ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕೋಲಾರ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ. ನಾರಾಯಣಪ್ಪ ಕನ್ನಡ ಧ್ವಜಾರೋಹಣ ಮಾಡಿದರು. ಕೋಲಾರದ ಪತ್ರಾಂಕಿತ ವ್ಯವಸ್ಥಾಪಕ ಬಿ ವೆಂಕಟರಾಮ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಕನ್ನಡ ಭವನದ ರಜತ ಸಂಭ್ರಮದ ನವೀಕೃತ ವೇದಿಕೆಯನ್ನು ಡಾ. ವೆಂಕಟ್ರಮಣ ಹೊಳ್ಳ ಲೋಕಾರ್ಪಣೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಮುಖ್ಯಸ್ಥ ಬಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, ಪ್ರಾಧ್ಯಾಪಕ ಡಾ. ಶರಣಪ್ಪ ಗಬ್ಬೂರು, ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಸಾಹಿತಿ ರುಬೀನಾ ಎಂ. ಎ, ಸಾಮಾಜಿಕ ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ಶ್ರೀಧರ ಶೆಟ್ಟಿ ಮುಟ್ಟಂ, ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ನಿವೃತ್ತ ಪ್ರಾಂಶುಪಾಲ ಪೆÇ್ರ. ಶ್ರೀನಾಥ್ ಕಾಸರಗೋಡು ಭಾಗವಹಿಸಿದ್ದರು. ಪತ್ರಕರ್ತ ಪ್ರದೀಪ್ ಬೇಕಲ್ ಸ್ವಾಗತಿಸಿದರು. ವಸಂತ ಕೆರೆಮನೆ ವಂದಿಸಿದರು. ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ನಿರೂಪಿಸಿದರು. ಈ ಸಂದರ್ಭದಲ್ಲಿ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ- ರೂಪಕಲಾ ದಂಪತಿಯ ವಿವಾಹ ರಜತ ಸಂಭ್ರಮ ಆಚರಿಸಲಾಯಿತು. 25 ಮಂದಿ ಮುತ್ತೈದೆಯರಿಗೆ ಬಾಗಿನ ಸಮರ್ಪಿಸಲಾಯಿತು. ನಂತರ ಪ್ರಾಧ್ಯಾಪಕ ಜಯಾನಂದ ಪೆರಾಜೆ ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಿತು. ಸುಮಾರು 20ಕ್ಕೂ ಮಿಕ್ಕಿದ ಕವಿಗಳು ಚುಟುಕು ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಗಡಿನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ 2025ರ ಸಾಲಿನ ಸ್ವರ್ಣಭೂಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಭರವಸೆಯ ಬೆಳಕು ಪ್ರಶಸ್ತಿ, ಲೈಟ್ ಅಫ್ ಹೋಪ್ಸ್ ಅಚ್ಯುಮೆಂಟ್ ಅವಾರ್ಡ್ ಪ್ರದಾನ ಮಾಡಲಾಯಿತು. ನಂತರ ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಕಲಾವಿದರಿಂದ ಸಾಂಸ್ಕೃತಿಕ ವೈಭವ ಹಾಗೂ ಕೀಕಾನ ವಿಷ್ಣುಪ್ರಿಯ ಮಹಿಳಾ ಸಂಘದ ಸದಸ್ಯರಿಂದ ನೃತ್ಯ ಸಂಭ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಖ್ಯಾತ ವಿಮರ್ಶಕ ಡಾ.ಬಿ ಜನಾರ್ದನ ಭಟ್, ಡಾ.ರಾಧಾಕೃಷ್ಣ ಕೆ ಉಳಿಯತ್ತಡ್ಕ, ಗುರುಪ್ರಸಾದ್ ಕೊಟೆಕಣಿ, ಶಶಿಕಲಾ ಟೀಚರ್ ಕುಂಬಳೆ, ರಾಜೇಶ್ ಕೋಟೆಕಣಿ ಭಾಗವಹಿಸಿದ್ದರು.






