ಕಾಸರಗೋಡು: ಸೂಕ್ತ ದಾಖಲೆಗಳಿಲ್ಲದೆ ಕಾರಿನಲ್ಲಿಸಾಗಿಸುತ್ತಿದ್ದ 10ಲಕ್ಷ ರೂ.ನಗದು ಮಂಜೇಶ್ವರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಠಾಣೆ ಎಸ್.ಐ ವೈಷ್ಣವ್ ನೇತೃಥ್ವದಲ್ಲಿ ತಲಪ್ಪಾಡಿಯಲ್ಲಿ ಕಾರ್ಯಾಚರಣೆ ನಡೆಸುವ ಮಧ್ಯೆ ಮಂಗಳೂರಿನಿಂದ ಆಗಮಿಸಿದ ಕಾರು ತಡೆದು ತಪಾಸಣೆ ನಡೆಸಿದಾಗ ಕಾರಿನ ಬೋನೆಟ್ ಸಂದಿಯಲ್ಲಿರಿಸಿ ನಗದು ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿತ್ತು.
ಎರಡು ದಿವಸ ಹಿಂದೆ ತಲಪ್ಪಾಡಿಯಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 13ಲಕ್ಷ ರೂ. ನಗದನ್ನು ಎಸ್.ಐ ಉಮೇಶ್ ಕೆ.ಆರ್ ನೇತೃತ್ವದ ಪೊಲೀಸರ ತಂಡ ವಶಪಡಿಸಿಕೊಂಡಿತ್ತು. ಸ್ಥಳೀಯಾಡಳಿತ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆ ಚುರುಕುಗೊಳಿಸಿರುವಮಧ್ಯೆ ಅನಧಿಕೃತ ನಗದು ಸಾಗಾಟ ಪತೆತ ಬೆಳಕಿಗೆ ಬರಲಾರಂಭಿಸಿದೆ.




