ಕಾಸರಗೋಡು: ತ್ರಿಕ್ಕರಿಪುರ ಪಂಚಾಯಿತಿ ಮುಂಡೆಮ್ಮಾಡ್ ಸೇತುವೆಯು ಇಲ್ಲಿನ ದ್ವೀಪ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವುದರ ಜತೆಗೆ ಸ್ಥಳೀಯ ಜನರ ಜೀವನ ಮಟ್ಟವನ್ನು ಸುಧಾರಿಸಲಿರುವುದಾಗಿ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ಹೇಳಿದರು.
ಅವರು ಮುಂಡೆಮ್ಮಡ್ ದ್ವೀಪದ ಜನರ ಬಹುದಿನಗಳ ಬೇಡಿಕೆಯಾಗಿರುವ ನೂತನ ಸೇತುವೆನ್ನು ನಿನ್ನೆ ಲೋಕಾರ್ಪಣೆಗೈದು ಮಾತನಾಡಿದರು.
11 ಮೀಟರ್ ಅಗಲದ ಮುಂಡೆಮ್ಮಾಡ್ ಸೇತುವೆಯು ಪಾದಚಾರಿ ಮಾರ್ಗವನ್ನೂ ಹೊಂದಿದ್ದು, ಸಾರಿಗೆ ಸೌಲಭ್ಯ ಒದಗಿಸಲಿದೆ. ಪ್ರವಾಸೋದ್ಯಮ ಸಾಮಥ್ರ್ಯವನ್ನು ಹೆಚ್ಚಿಸುವಲ್ಲೂ ಸೇತುವೆಗಳು ಮಹತ್ವದ ಪಾತ್ರ ವಹಿಸುತ್ತಿದೆ. ಎಡರಂಗ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಸಚಿವರು ಹೇಳಿದರು. ತ್ರಿಕ್ಕರಿಪುರ ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ರಫಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ. ರವೀಂದ್ರನ್, ವಾರ್ಡ್ ಕೌನ್ಸಿಲರ್‍ಗಳಾದ ಪಿ. ಕುಞÂರಾಮನ್, ಟಿ. ಸುಭಾಷ್, ಲೋಕೋಪಯೋಗಿ ಇಲಾಖೆ ಕೋಯಿಕ್ಕೋಡ್ ವಿಭಾಗ(ಸೇತುವೆ) ಅಧೀಕ್ಷಕ ಎಂಜಿನಿಯರ್ ಇ.ಜಿ. ವಿಶ್ವಪ್ರಕಾಶ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ. ಶಾಂತಾ ಸ್ವಾಗತಿಸಿದರು. ಲೋಕೋಪಯೋಗಿ ಇಲಾಖೆ ಕಾಸರಗೋಡು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ರಾಜೀವನ್ ವಂದಿಸಿದಸಿದರು.


