ಬದಿಯಡ್ಕ ಡಿವಿಜನ್ ನಿಂದ ಸಲ್ಲಿಸಲ್ಪಟ್ಟ ಕೆ. ಬಿಜು ಹಾಗೂ ಮಂಜೇಶ್ವರ ಡಿವಿಜನ್ ನಿಂದ ಸಲ್ಲಿಸಲ್ಪಟ್ಟ ಬುರ್ಷಾ ಎಂಬವರ ನಾಮಪತ್ರಗಳು ನಿನ್ನೆ ನಡೆದ ಸೂಕ್ಷ್ಮ ತಪಾಸಣೆಯಲ್ಲಿ ತಿರಸ್ಕೃತಗೊಂಡಿದೆ.
ನಾಮಪತ್ರಿಕೆ ಜತೆ ಸಮರ್ಪಿಸಲ್ಪಟ್ಟ ಪ. ಜಾತಿ ಸರ್ಟಿಫಿಕೇಟ್ ಕಾಲಾವಧಿ ಮುಗಿದಿದ್ದರಿಂದ ಕೆ. ಬಿಜು ನಾಮಪತ್ರ ಅಸಿಂಧುಗೊಂಡಿತು. ಇದೇ ವೇಳೆ ನಾಮಪತ್ರಿಕೆಯಲ್ಲಿ ಸಹಿ ಹಾಕದೇ ಇದ್ದು, ಪ್ರತಿಜ್ಞೆ ಸಲ್ಲಿಸದೇ ಇದ್ದ ಕಾರಣ ಬುರ್ಷಾ ನಾಮಪತ್ರಿಕೆ ತಿರಸ್ಕೃತವಾಯಿತು.
ಉಳಿದಂತೆ ಜಿಲ್ಲಾ ಪಂಚಾಯತಿನ 113ನಾಮ ಪತ್ರಗಳು ಸ್ವೀಕೃತಗೊಂಡಿದೆ. 24ರಂದು ನಾಮಪತ್ರ ಹಿಂತೆಗೆಯಲು ಅಂತಿಮದಿನವಾಗಿದೆ. ಜಿಲ್ಲಾಧಿಕಾರಿ ಕೆ. ಇಂಬುಶೇಖರ್ ಮೇಲ್ನೋಟದಲ್ಲಿ ನಾಮಪತ್ರಿಕೆಗಳ ಸೂಕ್ಷ್ಮ ತಪಾಸಣೆ ನಡೆಯಿತು.
ಉಳಿದಂತೆ ಜಿಲ್ಲಾ ಪಂಚಾಯತಿನ 113ನಾಮ ಪತ್ರಗಳು ಸ್ವೀಕೃತಗೊಂಡಿದೆ. 24ರಂದು ನಾಮಪತ್ರ ಹಿಂತೆಗೆಯಲು ಅಂತಿಮದಿನವಾಗಿದೆ. ಜಿಲ್ಲಾಧಿಕಾರಿ ಕೆ. ಇಂಬುಶೇಖರ್ ಮೇಲ್ನೋಟದಲ್ಲಿ ನಾಮಪತ್ರಿಕೆಗಳ ಸೂಕ್ಷ್ಮ ತಪಾಸಣೆ ನಡೆಯಿತು.