ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಪತ್ರಕರ್ತರಿಗೂ ಕೆಲವೊಂದು ನೀತಿ ಸಂಹಿತೆ ಬಾಧಕವಾಗಲಿದೆ.
ಸುದ್ದಿಯ ವಾಸ್ತವಿಕತೆ ಅರಿತುಕೊಂಡು ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸಬೇಕು. ಚುನಾವಣೆಗಳೊಂದಿಗೆ ಸಂಬಂಧಿಸಿದ ನಕಲಿ ಹಾಗೂ ಪೈಡ್ ಸುದ್ದಿಗಳನ್ನು ಪರಿಶೀಲಿಸಲು, ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ, ಜಿಲ್ಲಾ ಮಾಹಿತಿ ಅಧಿಕಾರಿ ಸಂಚಾಲಕರಾಗಿರುವ ಸ,ಮಿತಿ ಕಾರ್ಯಾಚರಿಸಲಿದೆ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಾದೇಶಿಕ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಚೇರಿಯ ಕಾನೂನು ಅಧಿಕಾರಿ, ತಲಾ ಒಬ್ಬ ಖ್ಯಾತ ಮಾಧ್ಯಮ/ಸಾಮಾಜಿಕ ಕಾರ್ಯಕರ್ತ, ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮ ತಜ್ಞರನ್ನು ಒಳಗೊಂಡ ಮಾಧ್ಯಮ ಸಂಬಂಧಿ ಸಮಿತಿಯನ್ನು ರಚಿಸಲಾಗಿದೆ.
ರಾಜ್ಯ ಮಟ್ಟದಲ್ಲಿ, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಎಂಟು ಸದಸ್ಯರ ಮಾಧ್ಯಮ ಸಂಬಂಧ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯ ಚುನವಣಾಧಿಕಾರಿ ಅಧ್ಯಕ್ಷ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂಚಾಲಕರಾಗಿದ್ದಾರೆ. ನಕಲಿಹಾಗೂ ಸುಳ್ಳು ಸುದ್ದಿ ಪ್ರಸಾರ ವಿರುದ್ಧ, ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವಿಶೇಷ ನಿಗಾ ಇರಿಸಲಾಗುವುದು. ಚುನಾವಣಾ ಪ್ರಕ್ರಿಯೆ ಪೂರ್ತಿಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಮಾಧ್ಯಮಗಳ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಚಾರ ನಡೆಸದಿರುವಂತೆ ಸೂಚಿಸಲಾಗಿದೆ. ಚುನಾವಣಾ ಪ್ರಸಾರಕ್ಕಾಗಿ ಸುದ್ದಿ ಪ್ರಸಾರ ಮಾನದಂಡ ಪ್ರಾಧಿಕಾರವು ಹೊರಡಿಸಿದ ಸೂಚನೆಗಳನ್ನು ಮತ್ತು ಮುದ್ರಣ ಮಾಧ್ಯಮಕ್ಕಾಗಿ ಭಾರತೀಯ ಪತ್ರಿಕಾ ಮಂಡಳಿಯು ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ನೀತಿ ಸಂಹಿತೆಯ ಕುರಿತು ಆಯೋಗವು ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಚುನಾವಣಾ ಆಯೋಗ ಸೂಚಿಸಿದೆ.




