ಬದಿಯಡ್ಕ: ಸೇವಾಭಾರತಿ ಬದಿಯಡ್ಕ ಇವರ ಆಶ್ರಯದಲ್ಲಿ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಸಹಭಾಗಿತ್ವದೊಂದಿಗೆ ಇತ್ತೀಚೆಗೆ ಪಳ್ಳತ್ತಡ್ಕ ಮುದ್ದು ಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು. ಸೇವಾ ಭಾರತಿಯ ಅಧ್ಯಕ್ಷ ಸದಾಶಿವ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪಾಲ್ಗೊಂಡ ಅತಿಥಿಗಳು ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆ ಕಾರ್ಯದರ್ಶಿ ಗುರುಪ್ರಸಾದ್ ರೈ ಸ್ವಾಗತಿಸಿದರು. ಸೀತಾರಾಮ ಗುರುಸ್ವಾಮಿ, ಉದಯ ಭಟ್ ಕೋರಿಕ್ಕಾರು, ಮುದ್ದುಮಂದಿರದ ವ್ಯವಸ್ಥಾಪಕಿ ಶ್ಯಾಮಲಾ ಎಸ್.ಎನ್.ಭಟ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾಂತಕುಮಾರಿ, ಕಾಸರಗೋಡು ಬ್ಲಡ್‍ಬ್ಯಾಂಕ್‍ನ ಹಿರಿಯ ವೈದ್ಯೆ ಡಾ. ಸೌಮ್ಯ, ಉಷಾ ಪಳ್ಳತ್ತಡ್ಕ, ಸೇವಾ ಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ ಮಾತನಾಡಿದರು. 45 ಸ್ವಯಂಸೇವಕ ರಕ್ತದಾನಿಗಳಲ್ಲಿ 26 ಸದಸ್ಯರು ರಕ್ತದಾನ ಮಾಡಿದರು. ಕೋಶಾಧಿಕಾರಿ ನರೇಂದ್ರ.ಬಿ.ಎನ್ ವಂದಿಸಿದರು.




.jpg)
