ಕಾಸರಗೋಡು: ನಗ್ನ ಚಿತ್ರಗಳನ್ನು ವಾಟ್ಸಪ್ ಮೂಲಕ ಕಳುಹಿಸಿಕೊಟ್ಟಲ್ಲಿ, ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಡುವುದಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿಗೆ ಸಂದೇಶ ರವಾನಿಸಿದ ವ್ಯಕ್ತಿಯನ್ನು ಕೋಯಿಕ್ಕೋಡಿನ ಬೇವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಕಾಟಿಪಳ್ಳ ನಾರಾಯಣೀಯಂ ನಿವಾಸಿ ಶಿಬಿನ್(29)ಬಂಧಿತ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ.
ತಾನು ಸಿನಿಮಾ ನಿರ್ದೇಶಕನೆಂದು ವಿದ್ಯಾರ್ಥಿನಿಯೊಂದಿಗೆ ಪರಿಚಯಮಾಡಿಕೊಂಡ ಶಿಬಿನ್, ತನಗೆ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು, ಇದಕ್ಕಾಗಿ ನಗ್ನ ಚಿತ್ರಗಳನ್ನು ರವಾನಿಸುವಂತೆ ಬಾಲಕಿಗೆ ಸಂದೇಶ ರವಾನಿಸುತ್ತಿದ್ದನು. ಈ ಬಗ್ಗೆ ಬಾಲಕಿ ಮನೆಯವರಲ್ಲಿ ಮಾಹಿತಿ ನೀಡಿದ್ದು, ಹೆತ್ತವರು ಬೇವೂರು ಠಾಣೆಗೆ ದೂರು ಸಲ್ಲಿಸಿದ್ದರು.




