ಉಪ್ಪಳ: ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ದಿನದ ಮಹತ್ವದ ಕುರಿತಾಗಿ ಮಕ್ಕಳು ತಮ್ಮ ಮಾತುಗಳಿಂದ ಗಮನಸೆಳೆದರು. ಮುಖ್ಯೋಪಾಧ್ಯಾಯಿನಿ ಸಲೀಲಕುಮಾರಿ ವಿ.ಕೆ. ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಹಿತನುಡಿಗಳನ್ನಾಡಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಹಾಡು, ನೃತ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹಕ ನುಡಿಗಳ ಮೂಲಕ ಶುಭ ಹಾರೈಸಿದರು. ಸಿಹಿತಿಂಡಿ ವಿತರಿಸಲಾಯಿತು.
ಅಧ್ಯಾಪಿಕೆ ಕಮಲಾಕ್ಷಿ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಲೋಹಿತಾಶ್ವ ವಂದಿಸಿದರು. ಅಧ್ಯಾಪಿಕೆ ಭವಿತ ನಿರೂಪಿಸಿದರು.




.jpg)
