ಬದಿಯಡ್ಕ: ಯೋಗ ಪ್ರತಿಭೆ ಅಭಿಜ್ಞಾ ಕರಂದಕ್ಕಾಡು ಅವರು ಪ್ರತಿನಿಧಿಕರಿಸುತ್ತಿರುವ ಯೋಗ ಫಾರ್ ಕಿಡ್ಸ್ ಸಂಸ್ಥೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ನಿವೃತ್ತ ಅಧಿಕಾರಿ ಡಾ. ಸಿ ಸೋಮಶೇಖರ ಅವರು ಮಂಗಳವಾರ ಭೇಟಿ ನೀಡಿ ಅಭಿನಂದಿಸಿ ಸಂಸ್ಥೆಯ ಸದಸ್ಯರಿಗೆ ರಾಜ್ಯೋತ್ಸವ ಸಂದೇಶವನ್ನು ನೀಡಿ ಪುಟಾಣಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಸೋಮಶೇಖರ್ ರಾಂಚಿ, ಕೊಡಗಿನ ಪತ್ರಕರ್ತ ಮೂರ್ತಿ ಕೆ.ಎಸ್, ಯೋಗ ಪೋೀರ್ ಕಿಡ್ಸ್ ಸಂಸ್ಥೆಯ ಶಿಕ್ಷಕಿ ತೇಜಕುಮಾರಿ, ಡಾ. ಸುಪ್ರಿಯಾ ಕೇಶವ್, ಪ್ರದೀಪ ಬಾಲಕೃಷ್ಣ, ಹರೀಶ್, ಮೃಣಾಲಿನಿ, ಅರ್ಚನಾ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.




.jpg)
.jpg)
