ಉಪ್ಪಳ: ಇತ್ತೀಚೆಗೆ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಮಂಜೇಶ್ವರ ಎಸ್.ಎ.ಟಿ. ಶಾಲಾ ಚಿತ್ರಕಲಾ ಶಿಕ್ಷಕ ಜಯಪ್ರಕಾಶ ಶೆಟ್ಟಿ ಬೇಳ ಅವರ ನೇತೃತ್ವದಲ್ಲಿ ವಿವಿಧ ಚಿತ್ರ ಕಲಾವಿದರ ಹಾಗೂ ಶಾಲಾ ಮಕ್ಕಳ ಚಿತ್ರ ಪ್ರದರ್ಶನ ಜನಮನ ರಂಜಿಸಿತು.
ಜಯಪ್ರಕಾಶ್ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ಕಲೋತ್ಸವ ಸಹಿತ ವಿವಿಧ ಸಮಾರಂಭಗಳಲ್ಲಿ ಚಿತ್ರಕಲಾ ಪ್ರದರ್ಶನ ಹಾಗೂ ತರಬೇತಿಗಳ ಮೂಲಕ ಹೊಸ ತಲೆಮಾರಿಗೆ ಕಲಾ ಪ್ರೇರಣೆ ಹಾಗೂ ವರ್ತಮಾನ ಕಾಲದ ವಿವಿಧ ಆಯಾಮಗಳ ಚಿತ್ರ ರಚನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ.




.jpg)
.jpg)
