ಮಂಜೇಶ್ವರ: ಕಣ್ಣೂರು ವಿಶ್ವವಿದ್ಯಾಲಯದ ಮಂಜೇಶ್ವರ ಕ್ಯಾಂಪಸ್‍ನಲ್ಲಿರುವ ಕಾನೂನು ವಿದ್ಯಾಲಯಕ್ಕೆ ಶಾಸಕರ ನಿಧಿಯನ್ನು ಬಳಸಿ ನಿರ್ಮಿಸಲಾದ ಕಟ್ಟಡವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಬುಧವಾರ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್ ಅವರ ಆಸ್ತಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಕಟ್ಟಡವನ್ನು 51 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಂಜೇಶ್ವರ ಕಾನೂನು ಅಧ್ಯಯನ ಕಾಲೇಜು ಜಿಲ್ಲೆಯ ಮೊದಲ ಕಾನೂನು ಅಧ್ಯಯನ ಕೇಂದ್ರವಾಗಿದ್ದು, ಸುಮಾರು 100 ವಿದ್ಯಾರ್ಥಿಗಳು ಮೂರು ವರ್ಷಗಳ ಎಲ್.ಎಲ್.ಬಿ. ಮತ್ತು ಎಲ್.ಎಲ್.ಎಂ. ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಉಪಾಧ್ಯಕ್ಷ ಪಿ.ಕೆ ಹನೀಫ್, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲೆವಿನಾ ಮೊಂತೆರೋ, ಉಪಾಧ್ಯಕ್ಷ ಸಿದ್ದೀಕ್ ಮುಹಮ್ಮದ್, ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಕಮಲಾಕ್ಷಿ, ವಿವಿ ಸಿಂಡಿಕೇಟ್ ಸದಸ್ಯ ಪಿ.ಸಜಿತ್ ಕುಮಾರ್, ಎನ್.ಅಬ್ದುಲ್ ಹಮೀದ್, ಯಾದವ ಬಡಾಜೆ, ಇ.ಎಸ್.ಪ್ರಸನ್ನಕುಮಾರಿ, ಯೂನಿಯನ್ ಅಧ್ಯಕ್ಷ ಕೆ.ಎಸ್.ಪ್ರಸನ್ನಕುಮಾರಿ ಮಾತನಾಡಿದರು. ವಿವಿ ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕನ್ ಸ್ವಾಗತಿಸಿದರು.




.jpeg)
