'ಸಿಬಿಎಸ್ ನ್ಯೂಸ್' ಸಂಸ್ಥೆಯ '60 ಮಿನಿಟ್ಸ್' ಕಾರ್ಯಮಕ್ರಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಅಮೆರಿಕವೂ ತನ್ನ ಪರಮಾಣು ಸಾಮರ್ಥ್ಯವನ್ನು ಪರೀಕ್ಷೆ ಮಾಡಲಿದೆ ಎನ್ನುವ ಊಹಾಪೋಹಗಳು ಕೇಳಿ ಬರುತ್ತಿರುವಾಗಲೇ ಟ್ರಂಪ್ ಅವರಿಂದ ಈ ಮಾತು ಬಂದಿದೆ.
ರಾಷ್ಟ್ರಗಳು ಈ ಬಗ್ಗೆ ಮಾತನಾಡುವುದಿಲ್ಲ. ಭೂಗರ್ಭದಲ್ಲಿ ಅವರು ಪರೀಕ್ಷೇ ಮಾಡುತ್ತಾರೆ. ಜನರಿಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ. ಸಣ್ಣ ಭೂಕಂಪನ ಆದ ಅನುಭವ ಅವರಿಗಾಗುತ್ತದೆ' ಎಂದು ಟ್ರಂಪ್ ಹೇಳಿದ್ದಾರೆ.
'ರಷ್ಯಾ ಹಾಗೂ ಚೀನಾವೂ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿದೆ. ಆದರೆ ಅವರು ಅದರ ಬಗ್ಗೆ ಮಾತನಾಡುತ್ತಿಲ್ಲ. ನಾವು ಬಹಿರಂಗವಾಗಿ ಹೇಳಿಕೊಳ್ಳುತ್ತೇವೆ. ನಾವು ಅವರಿಗಿಂತ ಭಿನ್ನ. ನಾವು ಅದರ ಬಗ್ಗೆ ಮಾತನಾಡುತ್ತೇವೆ. ನಾವು ಅದರ ಬಗ್ಗೆ ಮಾತನಾಡಲೇಬೇಕು, ಇಲ್ಲದಿದ್ದರೆ ನೀವು ವರದಿ ಮಾಡುತ್ತೀರಿ. ಆದರೆ ಅವರ ಬಳಿ ಆ ಬಗ್ಗೆ ಬರೆಯುವ ವರದಿಗಾರರೇ ಇಲ್ಲ' ಎಂದು ಟ್ರಂಪ್ ಹೇಳಿದ್ದಾರೆ.
'ಬೇರೆಯವರೂ ಪರೀಕ್ಷೆ ಮಾಡುತ್ತಿದ್ದಾರೆ, ಹೀಗಾಗಿ ನಾವೂ ಮಾಡುತ್ತಿದ್ದೇವೆ. ಉತ್ತರ ಕೊರಿಯಾ ಹಾಗೂ ಪಾಕಿಸ್ತಾನವೂ ಪರೀಕ್ಷೆ ಮಾಡುತ್ತಿದೆ' ಎಂದು ಹೇಳಿದ್ದಾರೆ.
'ಬೇರೆ ಅಣ್ವಸ್ತ್ರ ರಾಷ್ಟ್ರಗಳಿಗೆ ಸಮಾನವಾಗಿ ಪರೀಕ್ಷೆ ನಡೆಸಿ' ಎಂದು ಡೊನಾಲ್ಡ್ ಟ್ರಂಪ್ ಈ ಹಿಂದೆ ರಕ್ಷಣಾ ಇಲಾಖೆಗೆ ಸೂಚನೆ ನೀಡಿದ್ದರು.

