ಕಾಸರಗೋಡು: ಪ್ರಸಿದ್ಧ ಹಾಗೂ ಪುರಾತನ ಮಸೀದಿಗಳಲ್ಲಿ ಒಂದಾಗಿರುವ ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ತಙಳ್ ಉಪ್ಪಾಪ ಉರುಸ್ ಸಮಾರಂಭದ ಪ್ರಚಾರಾರ್ಥ ಭಿತ್ತಿಪತ್ರ ಅನಾವರಣ ಕಾರ್ಯಕ್ರಮ ತಳಂಗರೆಯಲ್ಲಿಜರುಗಿತು.
ತಳಂಗರೆ ಸಯ್ಯಿದ್ ಮಲಿಕ್ ದಿನಾರ್ ದರ್ಗಾ ಶರೀಫ್ ಸಮೀಪದ ಮಲಿಕ್ ದಿನಾರ್ ವಲಿಯ ಜುಮಾ ಅತ್ ಮಸೀದಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಮೊದಲ ಆವೃತ್ತಿಯನ್ನು ಜಮಾ ಅತ್ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಎಂ. ಅಬ್ದುಲ್ ರೆಹಮಾನ್ ಅವರಿಗೆ ಹಸ್ತಾಂತರಿಸುವ ಮೂಲಕ ಸಂಯುಕ್ತ ಜಮಾ ಅಧ್ಯಕ್ಷ , ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಮಲಿಕ್‍ದಿನಾರ್ ಖತೀಬ್ ಅಬ್ದುಲ್ ಮಜೀದ್ ಬಾಖವಿ ಪ್ರಾರ್ಥನೆ ನಡೆಸಿದರು. ತಳಂಗರೆ ಜಮಾಅತ್ ಪದಾಧಿಕಾರಿಗಳು ಬಶೀರ್, ಮೊಯಿನುದ್ದೀನ್ ಕೆ.ಕೆ ಪುರಂ, ನೆಲ್ಲಿಕುಂಜೆ ಜಮಾಅತ್ ಸಮಿತಿ ಕಾರ್ಯದರ್ಶಿ ಹನೀಫ್ ನೆಲ್ಲಿಕುನ್ನು, ಕೋಶಾಧಿಕಾರಿ ಎನ್.ಎ.ಹಮೀದ್, ಉರುಸ್ ಸಮಿತಿ ಅಧ್ಯಕ್ಷ ಟಿ.ಎ. ಮಹ್ಮದ್ ಕಲ್ಕಂಡಿ, ಕೋಶಾಧಿಕಾರಿ ಸಿ.ಎಂ. ಅಶ್ರಫ್, ಉಪಾಧ್ಯಕ್ಷ ಅಬ್ದು ತೈವಳಪ್ಪು, ಕಾರ್ಯದರ್ಶಿ ಎನ್.ಎಂ.ಸುಬೈರ್, ಸ್ವಯಂಸೇವಕ ಸಮಿತಿ ಕೋರ್ ಕಾರ್ಯದರ್ಶಿ ಅನೀಫ್ ಅಪ್ಪು ಸಮಿತಿಯ ಪದಾಧಿಕಾರಿಗಳಾದ ಟಿ.ಎಚ್. ಮುಜಮ್ಮಿಲ್ ಕಡಪ್ಪುರಂ, ಫೈಸಲ್ ಕೋಟಿಕಾ ಪಿ.ಎಂ.ಅಬ್ದುಲ್ ಕಾದರ್, ಅಬ್ಬಾಸ್ ವಟ್ಟಿಲ, ಎನ್.ಎ. ಇಸ್ಲಾಂರಶೀದ್ ಪಳ್ಳಂ, ನವಾಜ್ ಪದಾರ್, ನೌಫಲ್ ಕತಾರ್ ಉಪಸ್ಥೀತರಿದ್ದರು. ಉರುಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎ.ಇಕ್ಬಾಲ್ ಸ್ವಾಗತಿಸಿದರು.




