ಬದಿಯಡ್ಕ: ಆಸ್ಸಾಂನ ಡೇಕ್ಯಾ ಜೂಲಿಯ ಸಿಂಗ್ರಿ ಗುಪ್ತೇಶ್ವರ ದೇವಾಲಯದಲ್ಲಿ ನವೆಂಬರ್ 30 ರವರೆಗೆ ನಡೆಯುವ ಅತಿರುದ್ರ ಮಹಾಯಾಗಕ್ಕೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸಂಕಲ್ಪ ಮಾಡಿ ಇತ್ತೀಚೆಗೆ ಚಾಲನೆ ನೀಡಿದರು. ಆರೋಗ್ಯ ಸಚಿವ ಅಶೋಕ್ ಸಿಂಘಾಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬೇಕಲ ಸಮೀಪದ ಪೆರಿಯ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠದ ಆಚಾರ್ಯ ವಿಷ್ಣುಪ್ರಸಾದ್ ಹೆಬ್ಬಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅತಿರುದ್ರ ಯಾಗದ ಮೊದಲ ದಿನ, ಶ್ರದ್ಧಾ ಜೋಗಿತ್ತಾಯ ಅವರ ಭರತನಾಟ್ಯ ಹಾಗೂ ಹೇಮಂತ ಹಾಗೂ ಹೇರಂಬ ಸಹೋದರರ ಪುಳ್ಳಾಂಗುಳಿಯ ಕಛೇರಿಗಳು ಯಜ್ಞಶಾಲಾ ವೇದಿಕೆಯಲ್ಲಿ ನೆರವೇರಿದವು.




.jpg)
