ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ 2ನೇ ಹಂತದ ಬಿಡುಗಡೆ ಹಾಗೂ ಪ್ರಚಾರ ಕಾರ್ಯದ ಚಾಲನೆ ಪದ್ಮವಿಭೂಷಣ ಡಾ. ವೀರೇಂದ್ರ ಹೆಗಡೆಯವರ ದಿವ್ಯಹಸ್ತದಿಂದ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು.
ಪೆರಡಾಲ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಖಾವಂದರನ್ನು ಧರ್ಮಸ್ಥಳದಲ್ಲಿ ಭೇಟಿಯಾಗಿ ಪೆರಡಾಲ ಕ್ಷೇತ್ರದ ಜೀರ್ಣೋದ್ಧಾರ ಕೆಲಸಗಳ ಪ್ರಗತಿ ಮಾಹಿತಿಯನ್ನು ನೀಡಿದರು. ಇದಕ್ಕಾಗಿ ಧರ್ಮಸ್ಥಳದಿಂದ ಈಗಾಗಲೇ ನೀಡಿರುವ ಸಹಕಾರವನ್ನು ಕೃತಜ್ಞತಾಪೂರ್ವಕ ಸ್ಮರಿಸಿ, ಮುಂದಿನ ಯೋಜನೆಗಳಿಗೆ, ಬ್ರಹ್ಮಕಲಶೋತ್ಸವಕ್ಕೆ ಆರ್ಥಿಕ ಸಹಾಯ ನೀಡಲು ಅಪೇಕ್ಷಿಸಲಾಯಿತು. ಅಲ್ಲದೆ, ಬ್ರಹ್ಮಕಲಶೋತ್ಸವಕ್ಕೆ ಆಗಮಿಸಬೇಕೆಂದು ವಿನಂತಿ ಮಾಡಲಾಯಿತು. ಆಡಳಿತ ಮೊಕ್ತೇಸರ ಶ್ರೀ ವೆಂಕಟರಮಣ ಭಟ್ ಚಂಬಲ್ತಿಮಾರ್ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಜೀರ್ಣೋದ್ಧಾರ ಕಾಮಗಾರಿ ಮತ್ತು ಬ್ರಹ್ಮ ಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ ಗುತ್ತು, ಮೊಕ್ತೇಸರ ಸೀತಾರಾಮ ನವಕಾನ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು, ಕೋಶಾಧಿಕಾರಿ ಸೂರ್ಯನಾರಾಯಣ.ಬಿ.,
ಜೊತೆ ಕಾರ್ಯದರ್ಶಿಗಳಾದ ಗಣೇಶ ಪ್ರಸಾದ್, ಡಾ.ಶ್ರೀಶ ಕುಮಾರ್ ಪಂಜಿತ್ತಡ್ಕ, ಭಾಸ್ಕರ ಪಂಜಿತ್ತಡ , ಗಣೇಶ ಕೃಷ್ಣ ಅಳಕ್ಕೆ, ವೇ.ಮೂ.ವೆಂಕಟೇಶ್ವರ ಭಟ್ ಪಟ್ಟಾಜೆ, ಶಿವರಾಮ್ ಭಟ್ ಪಟ್ಟಾಜೆ, ಅರವಿಂದ ಭಟ್ ಉಪಸ್ಥಿತರಿದ್ದರು.






