ಪೆರ್ಲ: ಕುರಡ್ಕದ ಮನೆಯೊಂದಕ್ಕೆ ದಾಳಿನಡೆಸಿದ ಪೊಲೀಸರು ನಕಲಿ ಕೋವಿ ಹಾಗೂ ಮದ್ದು ಗುಂಡು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕುರಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ ಎಂಬಾತನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಅವರಿಗೆ ಲಭಿಸಿದ ಖಚಿತ ಸುಳಿವಿನ ಮೇರೆಗೆ ನೀಡಿದ ನಿರ್ದೇಶನದಂತೆ ಬದಿಯಡ್ಕ ಠಾಣೆ ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಚರಣೆ ನಡೆಸಿದೆ. ಆರೋಪಿ ಮನೆಯಿಂದ ನಕಲಿ ಕೋವಿ ಮತ್ತು 42ಮದ್ದುಗುಂಡನ್ನು ವಶ ಪಡಿಸಿಕೊಳ್ಳಲಾಗಿದೆ. ಮರದ ವ್ಯಾಪಾರಿಯಾಗಿರುವ ಈತ ವನ್ಯಮೃಗ ಭೇಟೆಗೆ ಕೋವಿ ವಶ ಕೈವಶವಿರಿಸಿಕೊಂಡಿರಬೇಕೆಂದು ಪ್ರಾಥಮಿಕ ಮಾಹಿತಿ ಲಭಿಸಿದ್ದು, ಪೆÇಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಅವಳಿ ಕೊಲೆ ನಡೆದ ಪೆರಿಯ ಕಲ್ಯೋಟ್ ವ್ಯಾಪ್ತಿಯ ಕುರುಚಲುಕಾಡಿನಿಂದ ಎರಡು ದಿವಸದ ಹಿಂದ ನಾಡಕೋವಿ ಮತ್ತು ಮದ್ದು ಗುಂಡು ಬೇಕಲ ಪೆÇೀಲೀಸರು ವಶಪಡಿಸಿಕೊಂಡಿದ್ದರು. ಕಳ್ಳಬಟ್ಟಿ ವಿರುದ್ಧ ಕಾರ್ಯಾಚರಣೆಯನ್ವಯ ಸಾರಾಯಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೆÇದೆಸಂದಿಯಲ್ಲಿ ಹುಡುಕುವ ಮಧ್ಯೆ ಕೋವಿ ಪತ್ತೆಯಾಗಿತ್ತು.
ಸ್ಥಳೀಯಾಡಳಿತ ಚುನಾವಣಾ ಹಿನ್ನೆಲೆಯಲ್ಲಿ ಪರವಾನಿಗೆ ಹೊಂದಿದ ಕೋವಿಗಳನ್ನು ಆಯಾ ಪ್ರದೇಶದ ಠಾಣೆಗಳಿಗೆ ತಂದೊಪ್ಪಿಸುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಈ ಮಧ್ಯೆ ನಕಲಿ ಕೋವಿ ಕೈವಶವಿರಿಸಿಕೊಂಡಿರುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.





