ಕಾಸರಗೋಡು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಹಾದಿ ಮಧ್ಯೆ ತಡೆದು, ಬೈಕಲ್ಲಿ ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ಅಂಬಲತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಯನ್ನೂರ್ ಸರ್ಕಾರ್‍ನ ಚಿಲಂಬಟ್ಟಿಶ್ಯೇರಿ ನಿವಾಸಿ, ಯೂತ್ ಕಾಂಗ್ರೆಸ್ ಕಾರ್ಯಕರ್ತ ಸಚಿನ್ ಕುರ್ಯಾಕೋಸ್ ಬಂಧಿತ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಾಯನ್ನುರಿನಲ್ಲಿ ಬಸ್ಸಿಳಿದು ಬಳಸುದರಿಯಾಗಿ ಸಂಚರಿಸುತ್ತಿದ್ದ ಯುವತಿಯನ್ನು ಹಿಂಬಾಲಿಸಿ ತೆರಳಿ, ಅಪಹರಿಸಲು ಯತ್ನಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




