HEALTH TIPS

ಕನ್ನಡ ರಾಜ್ಯೋತ್ಸವ-ಕವಿಗೋಷ್ಠಿಗೆ ಚುಟುಕುಗಳ ಆಹ್ವಾನ

ಕಾಸರಗೋಡು: ಕೋಲಾರ-ಕಾಸರಗೋಡು ಗಡಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-2025 ಕಾರ್ಯಕ್ರಮ ನ. 15ರಂದು ಮಧ್ಯಾಹ್ನ 1ರಿಂದ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ. ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಸಾರಥ್ಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು,ಕಾಸರಗೋಡು ಜಿಲ್ಲಾ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. 

ಕವಿಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಆಸಕ್ತರು ತಮ್ಮ ಹೆಸರನ್ನು  9447490344 ಸಂಖ್ಯೆಗೆ ವಾಟ್ಸಪ್ ಮೂಲಕ ನ. 10ರ ಮೊದಲು ನೀಡಬೇಕು.  ಭಾಗವಹಿಸುವ ಕವಿಗಳು 3 ಸ್ವರಚಿತ ಚುಟುಕುಗಳನ್ನು ವಾಚಿಸಬೇಕು.  ಗೋಷ್ಠಿಯಲ್ಲಿ ಆಯ್ದ 15 ಮಂದಿ ಕವಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries