ಕಾಸರಗೋಡು: ಕನ್ನಡ ಭವನ ಸ್ಥಾಪಕಾಧ್ಯಕ್ಷ ವಾಮನ ರಾವ್ ಬೇಕಲ್ ಅವರ ಬಗ್ಗೆ ರಚಿಸಲಾದ 'ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ಕೆ. ವಾಮನ್ ರಾವ್ ಬೇಕಲ ಎಂಬ ಪುಸ್ತಕ'ವನ್ನು ಕನ್ನಡಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಐ ಎ. ಎಸ್ ಲೋಕಾರ್ಪಣೆಗೈದರು.
ಕನ್ನಡ ಭವನದ ನಿಸ್ವಾರ್ಥ ಹಾಗೂ ನಿರಂತರ ಕನ್ನಡ ಕಾಯಕದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಡಾ. ಸಿ. ಎಸ್. ಸೋಮಶೇಖರ್ ಅವರು, ಕನ್ನಡ ಭವನವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುತ್ತಿರುವ ಕನ್ನಡ ಭವನ ಘಟಕದ ಚಟುವಟಿಕೆ ಆದರ್ಶಪ್ರಾಯವಾದುದು ಎಂದು ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್ ಸುಬ್ಬಯ್ಯ ಕಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಸೋಮಶೇಖರ್ ಗಾಂಜಿ, ಡಾ. ಕೆ ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್ ಉಪಸ್ಥಿತರಿದ್ದರು.
ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ಕೆ. ವಾಮನ್ ರಾವ್ ಬೇಕಲ'ಪುಸ್ತಕವನ್ನು ಡಾ. ನಾ. ಮೊಗಸಾಲೆ ಸಾರತ್ಯದ ಕನ್ನಡ ಸಂಘ ಕಾಂತಾವರ "ನಾಡಿಗೆ ನಮಸ್ಕಾರ ಪುಸ್ತಕ ಮಾಲೆಯಲ್ಲಿ ಪ್ರಕಟಗೋಳಿಸಿದೆ.





