ಕಾಸರಗೋಡು: ಮೃಗ ಸಂರಕ್ಷಣಾ ಇಲಾಖೆ ನಿವೃತ್ತ ನೌಕರ, ಕೂಡ್ಲು ಪಾರೆಕಟ್ಟೆ 'ಮುಕುಂದಂ ನಿವಾಸ'ದ ಕೆ. ಬಾಬುರಾಜ್ (57)ಅವರ ಮೃತದೇಹ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರ್ಷದ ಹಿಂದೆಯಷ್ಟೇ ಇವರು ಸರ್ಕಾರಿ ಹುದ್ದೆಯಿಂದ ನಿವೃತ್ತರಾಗಿದ್ದರು.
ಮನೆಯಿಂದ ಅನತಿ ದೂರದಲ್ಲಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಇವರನ್ನು ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಸೇರಿಸಲಾಗಿದ್ದರೂ, ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೂಲತಃ ಕೊಲ್ಲಂ ನಿವಾಸಿಯಾಗಿರುವ ಬಾಬುರಾಜ್ ಅವರು, ಕೂಡ್ಲು ಗುವೆತ್ತಡ್ಕ ನಿವಾಸಿ ಹಾಗೂ ಪಾಡಿ ಎಎಲ್
ಪಿ ಶಾಲಾ ಶಿಕ್ಷಕಿ ಆಶಾ ಅವರನ್ನು ವಿವಾಹಿತರಾಗಿ ಪಾರೆಕಟ್ಟೆಯಲ್ಲಿ ನೆಲೆಸಿದ್ದರು. ಶವ ಮಹಜರಿನ ನಂತರ ಮೃತದೇಹವನ್ನು ಹುಟ್ಟೂರು ಕೊಲ್ಲಂಗೆ ಕೊಂಡೊಯ್ಯಲಾಯಿತು.





