ಕಾಸರಗೋಡು: ಮತದಾರ ಪಟ್ಟಿ ತೀವ್ರ ಪರಿಷ್ಕರಣೆಯ ಎಲ್ಲಾ ಸೂಚನೆ ,ನಿರ್ದೇಶನ, ಫಾರಂ ಗಳನ್ನು ಕಾಸರಗೋಡಿನ ಕನ್ನಡಿಗರಿಗೆ ಕನ್ನಡದಲ್ಲಿಯೇ ಒದಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕವು ಅಧಿಕೃತರನ್ನು ಒತ್ತಾಯಿಸಿದೆ.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕುಗಳನ್ನು ಕಡೆಗಣಿಸಿ ಕನ್ನಡಿಗರಿಗೆ ಮಲಯಾಳ ಭಾಷೆಯ ಫಾರಂಗಳನ್ನು ವಿತರಿಸುತ್ತಿರುವುದನ್ನು ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ. ಪರಿಷ್ಕರಣೆಯ ಕರ್ತವ್ಯದಲ್ಲಿರುವ ಕನ್ನಡ ಅಧ್ಯಾಪಕರಿಗೆ ಮತ್ತು ಕನ್ನಡ ಮತದಾರರಿಗೆ ಆಗುವ ಅನ್ಯಾಯವನ್ನು ಕೂಡಲೇ ಪರಿಹರಿಸಬೇಕೆಂದು ಕ.ಸಾ.ಪ ಕೇರಳ ಗಡಿನಾಡ ಘಟಕ ಹೇಳಿಕೆ ಮೂಲಕ ಒತ್ತಾಯಿಸಿದೆ.




