ಮುಳ್ಳೇರಿಯ: ದೇಲಂಪಾಡಿ ಪಂಚಾಯಿತಿ ಬಂಟರ ಸಂಘದ ಮಹಾಸ ಸಭೆಯು ಮೆಣಸಿನಕಾನ ನೆಲ್ಲಿಂಜೆ ಗುತ್ತಿನ ಮನೆಯಲ್ಲಿ ಜರಗಿತು. ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಸಮಾರಂಭ ಉದ್ಘಾಟಿಸಿ ಮಾತನಾಡಿ, ಎರಡೂವರೆ ವರ್ಷಗಳ ಹಿಂದೆ ರಚನೆಯಾಘಿರುವ ಬಂಟರ ಸಂಘವು ವಿವಿಧ ಸಮಾಜಮುಖಿ ಚಟುವಟಿಕೆಗಳಿಂದ ಸಮಾಜ ಬಾಂಧವರ ವಿಶ್ವಾಸಕ್ಕೆ ಪಾತ್ರವಾಗಿರುವುದಾಗಿ ತಿಳಿಸಿದರು. ಬಂಟರ ಸಂಘ ದೇಲಂಪಾಡಿ ಪಂಚಾಯಿತಿ ಘಟಕದ ಅಧ್ಯಕ್ಷ ಸಂಜೀವ ರೈ ಮುದಿಯಾರು ಅಧ್ಯಕ್ಷತೆ ವಹಿಸಿದ್ದರು.
ರವೀಂದ್ರ ರೈ ಮಲ್ಲಾವರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಬಂಟರ ಸಂಘದ ಜತೆ ಕಾರ್ಯದರ್ಶಿ ಕಿರಣ್ ಮಾಡ, ಕೊರಗಪ್ಪ ರೈ, ಸತೀಶ್ ರೈ ಬೆಳ್ಳಿಪ್ಪಾಡಿ ವಾರಿಜ ರೈ ಕಲ್ಲಡ್ಕ ಮಹಾಬಲ ರೈ ಬೋಲ್ಪಾರು, ಸವಿತಾ ರೈ, ಸುಂದರ ರೈ, ಸಾಯಿನಾಥ್ ರೈ, ವಿಶ್ವನಾಥ್ ರೈ ಮಣಿಯೂರು ರತ್ನಾಕರ ರೈ, ವೀಣಾ ರೈ ಪ್ರೇಮಾ ರೈ ಗಂಗಾಧರ ರೈ, ಚಂದ್ರ ಉಜಂಪಾಡಿ, ಮೋಹನದಾಸ ರೈ ಜಗದೀಶ ರೈ, ಸದಾಶಿವ ರೈಕಕ್ಕಪ್ಪಾಡಿ ಉಷಾ ರೈ ಉಪಸ್ಥಿತರಿದ್ದರು.
ಕಾರ್ಯದರ್ಶಿ ಲಂಭೋದರ ಶೆಟ್ಟಿ ಸ್ವಾಗತಿಸಿದರು. ರಾಮಯ್ಯ ರೈ ಕಲ್ಲಡ್ಕ ಗುತ್ತು ಕಾರ್ಯ ಕ್ರಮ ನಿರೂಪಿಸಿದರು. ಉದಯ ಕುಮಾರ್ ದೇಲಂಪಾಡಿ ವಂದಿಸಿದರು
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಮಾನಂದ ರೈ ಮುದಿಯಾರು ಅಧ್ಯಕ್ಷ, ಉದಯ ಕುಮಾರ್ ದೇಲಂಪಾಡಿ ಕಾರ್ಯದರ್ಶಿ, ರಾಮಯ್ಯ ರೈ ಕಲ್ಲಡ್ಕ ಗುತ್ತುಕೋಶಾಧಿಕಾರಿ, ಮಹಾಬಲ ರೈ ಬೋಲ್ಪಾರು, ವಾರಿಜ ರೈ ಕಲ್ಲಡ್ಕ ಉಪಾಧ್ಯಕ್ಷರು, ವಿಶ್ವನಾಥ ರೈ ಮಣಿಯೂರು, ರತ್ನಾಕರ ರೈ ಮುದಿಯಾರು ಜತೆ ಕಾರ್ಯದರ್ಶಿಗಳು, ಗೌರವಾಧ್ಯಕ್ಷರಾಗಿ ರಾಮ್ ರತನ್ ನಾಯಕ್, ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷ ಸಂಜೀವ ರೈ, ಮುದಿಯಾರು ಸೀತಾರಾಮ ರೈ ಕಲ್ಲಡ್ಕ ಅವರುಗಳನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.





