HEALTH TIPS

ಡ್ರಗ್ಸ್‌: ಭಾರತ- ಮ್ಯಾನ್ಮಾರ್ ಗಡಿಯಲ್ಲಿ ಇ.ಡಿ ಶೋಧ

ನವದೆಹಲಿ: ಮಾದಕವಸ್ತು ಕಳ್ಳಸಾಗಣೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾರತ- ಮ್ಯಾನ್ಮಾರ್‌ ಗಡಿಯಲ್ಲಿನ ಮಿಜೋರಾಂ ಸೇರಿದಂತೆ ಅಸ್ಸಾಂ ಮತ್ತು ಗುಜರಾತ್‌ನ ಕೆಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ಶೋಧ ನಡೆಸಿದೆ.

ಕೆಲವು ಡಿಜಿಟಲ್‌ ಉಪಕರಣಗಳು ಸೇರಿದಂತೆ ₹35 ಲಕ್ಷ ನಗದನ್ನು ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಜೋರಾಂನ ಐಜ್ವಾಲ್‌, ಚಂಫೈ, ಅಸ್ಸಾಂನ ಶ್ರೀಭೂಮಿ (ಕರೀಮ್‌ಗಂಜ್‌) ಹಾಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ಶೋಧ ನಡೆಸಲಾಗಿದೆ ಎಂದಿದ್ದಾರೆ.

ಆರು ಜನರಿಂದ ₹1.41 ಕೋಟಿ ಬೆಲೆಯ 4.72 ಕೆ.ಜಿ. ಹೆರಾಯಿನ್‌ ವಶಪಡಿಸಿಕೊಂಡ ಮಿಜೋರಾಂ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಿಂದ ಈ ತನಿಖೆ ಆರಂಭವಾಗಿದೆ. ಭಾರತ- ಮ್ಯಾನ್ಮಾರ್‌ ಗಡಿಯಲ್ಲಿ ಇ.ಡಿ ನಡೆಸಿದ ಮೊದಲ ಶೋಧ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries