ಕೊಚ್ಚಿ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಾರ್ಡ್‍ಗಳ ವಿಭಜನೆಗಾಗಿ ರಾಜ್ಯ ಸೀಮಾ ನಿರ್ಣಯ(ಡಿಲಿಮಿನೇಶನ್) ಆಯೋಗ ಹೊರಡಿಸಿದ ಅಂತಿಮ ಅಧಿಸೂಚನೆಗಳ ವಿರುದ್ಧದ ಎಲ್ಲಾ ರಿಟ್ ಮೇಲ್ಮನವಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ.
ಅಕ್ಟೋಬರ್ 7 ಮತ್ತು 13 ರ ಏಕ ಪೀಠದ ತೀರ್ಪುಗಳ ವಿರುದ್ಧ ಅರ್ಜಿದಾರರು ವಿಭಾಗೀಯ ಪೀಠದ ಮುಂದೆ ಸಲ್ಲಿಸಿದ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ.
ಅರ್ಜಿಗಳಲ್ಲಿ ಎತ್ತಲಾದ ಎಲ್ಲಾ ದೂರುಗಳು ಒಂದೇ ರೀತಿಯದ್ದಾಗಿವೆ ಎಂದು ತೀರ್ಮಾನಿಸಿ ನ್ಯಾಯಾಲಯವು ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಪರಿಗಣಿಸಿತು.
ಸಂವಿಧಾನದ 243 ಒ(ಎ) ಮತ್ತು 243 ಝಡ್.ಜಿ. ವಿಧಿಗಳ ಅಡಿಯಲ್ಲಿ ಸೀಮಾ ನಿರ್ಣಯ ಆಯೋಗದ ಆದೇಶಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ ಎಂದು ಏಕ ಪೀಠವು ಗಮನಿಸಿತ್ತು. ಅರ್ಜಿಗಳ ವಿರುದ್ಧ ಸೀಮಾ ನಿರ್ಣಯ ಆಯೋಗ ಎತ್ತಿರುವ ಎಲ್ಲಾ ಪ್ರಾಥಮಿಕ ವಾದಗಳು ಕಾನೂನುಬದ್ಧ ಸಿಂಧುತ್ವವನ್ನು ಹೊಂದಿವೆ ಎಂದು ಏಕ ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಏಕ ಪೀಠದ ಆದೇಶ ಮತ್ತು ಅವಲೋಕನಗಳನ್ನು ವಿಭಾಗೀಯ ಪೀಠವು ಎತ್ತಿಹಿಡಿದಿದೆ.




