HEALTH TIPS

ಬಿಎಲ್‍ಓ ಆತ್ಮಹತ್ಯೆ-ಕಾಸರಗೋಡಿನಲ್ಲಿ ಎಸ್‍ಐಆರ್ ಬಹಿಷ್ಕರಿಸಿ ಪ್ರತಿಭಟನೆ

ಕಾಸರಗೋಡು: ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಓ) ಅನೀಶ್ ಜಾರ್ಜ್ ಎಂಬವರ ಆತ್ಮಹತ್ಯೆ ಪ್ರಕರಣ ಖಂಡಿಸಿ ಆಡಳಿತ ಮತ್ತು ಪ್ರತಿಪಕ್ಷ ಬೆಂಬಲಿತ ಸಂಘಟನೆಗಳು ಸೋಮವಾರ ಎಸ್‍ಐಆರ್ ಪ್ರಕ್ರಿಯೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. 

ಕೇರಳದಲ್ಲಿ ಸಥಳೀಯಾಡಳಿತ ಚುನಾವಣೆ ನಡೆಯುವ ಒಂದು ತಿಂಗಳಿಗೂ ಕಡಿಮೆ ಅವಧಿಯೊಳಗೆ ಎಸ್‍ಐಆರ್ ಪೂರ್ತಿಗೊಳಿಸಬೇಕೆಂಬ ಕೇಂದ್ರ ಚುನವಣಾ ಆಯೋಗದ ತೀರ್ಮಾನ ಖಂಡಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ಕಾಂಗ್ರೆಸ್ ಮತ್ತು ಎಡರಂಗ ಅನುಕೂಲಕರ ಸಂಘಟನೆಗಳ ವಿವಿಧ ಇಲಾಖೆಗಳ ನೌಕರರು ಸೋಮವಾರ ಎಸ್‍ಐಆರ್ ಪ್ರಕ್ರಿಯೆ ಬಹಿಷ್ಕರಿಸಿ ಪ್ರತ್ಯೇಕವಾಗಿ ಮೆರವಣಿಗೆ ನಡೆಸಿದರು. 

ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಎಸ್‍ಐಆರ್ ಹೆಸರಿನಲ್ಲಿ ಬಿಎಲ್‍ಓ ಗಳ ಮೇಲಿನ ಅತಿಯಾದ ಕೆಲಸದ ಹೊರೆಯನ್ನು ಮುಂದೂಡುವುದು ಯಾ ಕೊನೆಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಕೆಲಸದ ಒತ್ತಡದಿಂದಾಗಿ ಕಣ್ಣೂರು, ಪಯ್ಯನ್ನೂರು ಕ್ಷೇತ್ರದ ಎಟ್ಟುಕುಡುಕ್ಕ ಬೂತ್ ಸಂಖ್ಯೆ 18 ರ ಬೂತ್ ಮಟ್ಟದ ಅಧಿಕಾರಿ ಮತ್ತು ಕುನ್ನಾರು ಎಯುಪಿ ಶಾಲೆಯ ಕಚೇರಿ ಪರಿಚಾರಕ  ಅನೀಶ್ ಜಾರ್ಜ್ ಎಂಬವರು ಆತ್ಮಹತ್ಯೆಗೆ ಶರಣಾಗಿರುವುದಾಗಿ ಸಂಘಟನೆಗಳು ದೂರಿದೆ.

ಬಿಎಲ್‍ಓಗಳು ಯಾವುದೇ ರೀತಿಯ ಒತ್ತಡಗಳಿಗೆ ಒಳಗಾಗುವ ಅಗತ್ಯವಿಲ್ಲ. ಈಗಾಗಲೇ ತಮ್ಮ ಈ ಹಿಂದಿನ ಕೆಲಸಗಳಿಂದ ನ. 31ರ ವರೆಗೂ ಅವರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ ಅವರಿಗೆ ಮೇಲಧಿಕಾರಿಗಳಿಂದ ಸಂಪೂರ್ಣ ಸಹಕರವನ್ನೂ ನೀಡಲಾಗುತ್ತಿರುವುದಗಿ ಕಣ್ಣೂರು ಜಿಲ್ಲಾಧಿಕಾರಿ ಈಗಾಗಲೇ ಸ್ಪಷ್ಟಪಸಿಸಿದ್ದಾರೆ. ರಾಜಕೀಯ ಪಕ್ಷವೊಂದರಿಂದ ಅನೀಶ್ ಜಾರ್ಜ್ ಅವರಿಗೆ ಬೆದರಿಕೆ ಹಾಗೂ ಒತ್ತಡ ಇತ್ತೆನ್ನಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries