ಕಾಸರಗೋಡು: ಜಿಲ್ಲಾ ಮಟ್ಟದ ಸಿಡಿಎಸ್ ಅಧ್ಯಕ್ಷರ ಕಾರ್ಯಕ್ಷಮತೆ ಪರಿಶೀಲನಾ ಸಭೆ ಜಿಲ್ಲಾ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಿತು. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ, ಕುಟುಂಬಶ್ರೀ ಬೈಲಾ- ಚುನಾವಣೆ ಮತ್ತು ಸಿಡಿಎಸ್ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ನೂತನ ಉಪಕ್ರಮಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿತ್ತು.
ಈ ಸಂದರ್ಭ ವಿವಿಧ ವಿಷಯಗಳ ಕುರಿತು ತರಗತಿ ನಡೆಯಿತು. ವಿವಿಧ ಯೋಜನೆಗಳ ಪ್ರಗತಿ, ಮುಂದಿನ ಚಟುವಟಿಕೆಗಳು, ಚುನಾವಣಾ ಕರ್ತವ್ಯಗಳು ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. 'ಕುಟುಂಬಕ್ಕೆ ವಾಪಸಾಗಿ'ಯೋಜನೆಯನ್ವಯ ಪಿಲಿಕೋಡ್‍ನಲ್ಲಿ ಕುಟುಂಬಶ್ರೀ ಸ್ಥಳೀಯ ಚುನಾವಣೆಗಳಲ್ಲಿ ನಿರ್ವಹಿಸಬೇಕಾದ ಚಟುವಟಿಕೆಗಳು ಮತ್ತು ಕಾರ್ಯಗಳ ಜಿಲ್ಲಾ ಮಟ್ಟದ ವಿಮರ್ಶೆಯನ್ನು ಪ್ರಸ್ತುತಪಡಿಸಲಾಯಿತು.
ಸ್ನೇಹಿತ ನೇತೃತ್ವದಲ್ಲಿ, ಮಡಿಕೈನಲ್ಲಿ ಪ್ರಾರಂಭವಾಗುವ ಒಂದು ಲಕ್ಷ ಪುಸ್ತಕಗಳೊಂದಿಗೆ ಆರಂಭಗೊಳ್ಳಲಿರುವ ಗ್ರಂಥಾಲಯಕ್ಕೆ ಪುಸ್ತಕ ಸಂಗ್ರಹ ಅಭಿಯಾನದನ್ವಯ ಮನೆಗಳಲ್ಲಿ ವಿಶೇಷ ನೆರೆಕರೆ ಗುಂಪು ಸಭೆಗಳನ್ನು ನವೆಂಬರ್ 22 ರಿಂದ ಡಿಸೆಂಬರ್ 22 ರವರೆಗೆ ನಡೆಸಲು ತೀರ್ಮಾನಿಸಲಾಯಿತು. ಸಹಾಯಕ ಗುಂಪು ಸಂಘಟನಾ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ, ನವೀನ ಉಪಕ್ರಮಗಳಿಗೆ ಪ್ರಾಮುಖ್ಯತೆ ನೀಡಲು ಮತ್ತು ಯೋಜನೆಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಯಿತು. ನೆರೆಕರೆ ಗುಂಪಿನ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ, ಕನ್ನಡಿಗರ ಬಾಹುಳ್ಯದ ಪ್ರದೇಶದಲ್ಲಿ ಆರೋಗ್ಯ ಕಾರ್ಡ್‍ಗಳ ವಿತರಣೆ ಮತ್ತು ಕಚೇರಿಗಳಿಗೆ ಹಣಕಾಸು ಒದಗಿಸುವುದು, ಬಳಕೆ ಮತ್ತು ಆಡಳಿತ ನೀತಿಗಳು, ಭವಿಷ್ಯದಲ್ಲಿ ನವೀನ ಉಪಕ್ರಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಮತ್ತು ಪ್ರತಿ ಸಿಡಿಎಸ್‍ನಲ್ಲಿ ಹೊಸ ಯೋಜನೆಗಳನ್ನು ಸಿದ್ಧಪಡಿಸುವುದು ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಸಹಾಯಕ ಜಿಲ್ಲಾ ಸಂಯೋಜಕರಾದ ಸಿ.ಎಂ. ಸೌದಾ, ಡಿ. ಹರಿದಾಸ್, ಸಿ.ಎಚ್.ಇಕ್ಬಾಲ್ ಉಪಸ್ಥಿತರಿದ್ದರು.




