ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡ್ಯಮೆ ಪೂಕಟ್ಟೆಯಲ್ಲಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ರಸ್ತೆ ಅಂಚಿನ ಧರೆಗೆ ಡಿಕ್ಕಿಯಾದ ಪರಿಣಾಮ ಹತ್ತನೇ ತರಗತಿ ವಿದ್ಯಾರ್ಥಿನಿ, ಬಂಬ್ರಾಣ ಚೂರಿತ್ತಡ್ಕ ನಿವಾಸಿ ರಜಾಕ್ -ರಂಶೀನಾ ದಂಪತಿ ಪುತ್ರಿ ರಿಸ್ವಾನ (15)ಮೃತಪಟ್ಟಿದ್ದಾಳೆ.
ಕೊಡಿಯಮ್ಮೆ ಶಾಲಾ ವಿದ್ಯಾರ್ಥಿನಿಯಾಗಿದ್ದಳು. ಗುರುವಾರ ರಿಸ್ವಾನ ತನ್ನ ಗೆಳತಿಯೊಂದಿಗೆ ಇಲೆಕ್ಟ್ರಿಕ್ ಸ್ಕೂಟರಿನಲ್ಲಿ ಟ್ಯೂಷನ್‍ಗೆ ತೆರಳುತ್ತಿರುವ ಮಧ್ಯೆ ಅಪಘಾತ ನಡೆದಿದೆ. ಅಪಘಾತ ನಡೆದ ತಕ್ಷಣ ಇಬ್ಬರನ್ನೂ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಗಂಭೀರಗಾಯಗೊಂಡಿದ್ದ ರಿಸ್ವಾನಳನ್ನು ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರೂ ಪ್ರಯೋಜನವಾಗಿರಲಿಲ್ಲ.





