ಮಧೂರು: ಮನ್ನಿಪಾಡಿ ವಿವೇಕಾನಂದ ನಗರದಲ್ಲಿರುವ ಶ್ರೀ ನಾಗರಾಜ -ಗುಳಿಗ ದೈವ ಸನ್ನಿಧಿಯ ಬ್ರಹ್ಮಕಲಶೋತ್ಸವದ ನಿಧಿಸಂಗ್ರಹಕ್ಕಾಗಿ ಹೊರತರಲಾದ ನಿಧಿ ಸಂಗ್ರಹ ಕೂಪನ್ ಬಿಡುಗಡೆ ಸಮಾರಂಭ ಶ್ರೀ ನಾಗರಾಜ ಗುಳಿಗ ದೈವ ಸನ್ನಿಧಿಯಲ್ಲಿ ಜರಗಿತು.
ಸನ್ನಿಧಿಯ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣುಅಸ್ರ ಅವರು ಲಕ್ಕಿ ಕೂಪನನ್ನು ಬಿಡುಗಡೆಗೊಳಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾದ ದೇವದಾಸ್ ಕಾಮತ್, ಕಾರ್ಯಾಧ್ಯಕ್ಷ ದಾಮೋದರನ್, ಗೌರವಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅವಿನಾಶ್.ಆರ್, ಶ್ರೀ ನಾಗರಾಜ ಗುಳಿಗ ದೈವ ಸನ್ನಿಧಿಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಬ್ರಹ್ಮ ಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಪ್ರಜಿತ್, ಸನ್ನಿಧಿಯ ಕೋಶಾಧಿಕಾರಿ ಶರತ್ ಕುಮಾರ್, ಸುನಿಲ್ ಕುಮಾರ್, ಪ್ರಸಾದ್, ಅಶೋಕನ್, ಸಜಿತ್ ಕೆ.ಪಿ, ಅಜಿತ್ ಆರ್.ಎಸ್, ಉದಯಕುಮಾರ್ ಮನ್ನಿಪ್ಪಾಡಿ, ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.





