ಬದಿಯಡ್ಕ: ಇತ್ತೀಚೆಗೆ ಅಗಲಿದ ಕನ್ನಡ ಕಾದಂಬರಿ ಪ್ರಪಂಚದ ಮೇರು, ಸಾಹಿತ್ಯ ಯುಗ ಪ್ರವರ್ತಕ ನಾಡೋಜ ಪದ್ಮವಿಭೂಷಣ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಸ್ಮರಣಾಂಜಲಿ ಕಾರ್ಯಕ್ರಮ ನ.9 ರಂದು ಭಾನುವಾರ ಅಪರಾಹ್ನ 2.30 ರಿಂದ ಮಾನ್ಯ ಮೇಗಿನಡ್ಕದ ಅಕ್ಕಮ್ಮ ನಿಲಯದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಡಾ.ಭೈರಪ್ಪ ಅವರ ಸಾಹಿತ್ಯಾಭಿಮಾನಿ, ನಿಕಟ ಸಂಪರ್ಕದಲ್ಲಿದ್ದ ಡಾ.ಮನೋಹರ ರಾವ್ ಮೇಗಿನಡ್ಕ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅವರು ಡಾ.ಭೈರಪ್ಪ ಅವರ ಬದುಕು ಹಾಗೂ ಪ್ರಾಧ್ಯಾಪಕ ಟಿ.ಎ.ಎನ್.ಖಂಡಿಗೆ ಅವರು ಡಾ.ಭೈರಪ್ಪನವರ ಬರಹಗಳ ಬಗ್ಗೆ ಮಾತನಾಡಿ ಸ್ಮರಣಾಂಜಲಿ ಸಮರ್ಪಿಸುವರು. ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಉಪಸ್ಥಿತರಿರುವರು. ಈ ಸಂದರ್ಭ ಡಾ.ಭೈರಪ್ಪನವರ ಕೃತಿಗಳ ಓದು ಹಾಗೂ ಪರ್ವದ ಅವಲೋಕನ, ಶ್ರದ್ಧಾಂಜಲಿ ನುಡಿ ನಮನ ನಡೆಯಲಿದೆ. ಎಲ್ಲಾ ಸಾಹಿತ್ಯಾಭಿಮಾನಿಗಳು ಭಾಗವಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





