ಪೆರ್ಲ/ಉಪ್ಪಳ: ಎಣ್ಮಕಜೆ ಪಂಚಾಯಿತಿ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‍ಪಿಎಸ್‍ಟಿ ಕನ್ನಡ ತಾತ್ಕಾಲಿಕ ಹುದ್ದೆಗೆ ಶಿಕ್ಷಕರ ನೇಮಕಾತಿಗೆ ನ. 10ರಂದುಬೆಳಗ್ಗೆ 10ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿರುವುದು. ಅಭ್ಯರ್ಥಿಗಳು ಕೆ-ಟೆಟ್ ಕಡ್ಡಾಯವಾಗಿ ಉತ್ತೀರ್ಣರಗಿರಬೇಕಾಗಿದ್ದು, ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
ಬೇಕೂರಿನಲ್ಲಿ ಶಿಕ್ಷಕ ಹುದ್ದೆ:
ಮಂಗಲ್ಪಾಡಿ ಪಂಚಾಯಿತಿ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಚ್‍ಎಸ್‍ಎಸ್‍ಟಿ ಇಂಗ್ಲಿಷ್ (ಸೀನಿಯರ್)
ಅಧ್ಯಾಪಕ ಹುದ್ದೆಗೆ ದಿನ ವೇತನದನ್ವಯ ಶಿಕ್ಷಕರ ನೇಮಕಕ್ಕಾಗಿ ನ. 12ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿರುವುದು. ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆ ಪತ್ರದೊಂದಿಗೆ ಪ್ರಾಂಶುಪಾಲರ ಕಚೇರಿಯಲ್ಲಿ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(9964142229)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




