ಕಾಸರಗೋಡು: ಕಾಂಜಿರೋಟ್ ನಲ್ವತ್ತು ವಿಲ್ಲ ಕಯಗಂ ವ್ಯಾಪ್ತಿಯ ವಯನಾಡು ಕುಲವನ್ ಪೂರ್ವಿಕರ ಮನೆಗಳು ಹಾಗೂ ದೇವಸ್ಥಾನಗಳಿಗೆ ಹೊಸಕ್ಕಿ ನೀಡುವ ಕಾರ್ಯಕ್ರಮ ಭಾನುವಾರ ಆರಂಭಗೊಂಡಿತು.
ಕಾಸರಗೋಡು ತಳಂಗರೆ ಕೆಳಗಿನ ಮನೆಯಲ್ಲಿ ಪುತ್ತರಿ ಮಹೋತ್ಸವ, ನ. 10ರಂದು ರಾತ್ರಿ ಮರುಪುತ್ತರಿ ಮಹೋತ್ಸವ ಆರಂಭಗೊಳ್ಳಲಿರುವುದು. ನೆಲ್ಲಿಕುಂಜೆ ಮೂಲ ತರವಾಡು ಮನೆಯಲ್ಲಿ ನ. 16 ಮತ್ತು 17ರಂದು ಪುತ್ತರಿ ಮಹೋತ್ಸವ ನಡೆಯುವುದು. ತಳಂಗರೆ ಕಾನಕೋಡ್ ಬಾಂದಕುಡಿ ತರವಾಡಿನಲ್ಲಿ ನ. 22 ಮತ್ತು 23, ನೆಲ್ಲಿಕುನ್ನು ಕುಂದುವಳಪ್ಪು ತರವಾಡಿನಲ್ಲಿ ಡಿಸೆಂಬರ್ 12 ಮತ್ತು 13 ಆನವತುಕ್ಕಲ್ ದೊಡ್ಡಮನೆ ತರವಾಡಿನಲ್ಲಿ ಡಿ. 13 ಮತ್ತು 14, ಆನವದುಕ್ಕಲ್ ತರವಾಡು ಮನೆಯಲ್ಲಿ ಡಿ. 21 ಮತ್ತು 22, ತಳಂಗರೆ ಕಾನಕ್ಕೋಡ್ ಆನಮಂಜು ತರವಾಡಿನಲ್ಲಿ ಡಿ. 24 ಮತ್ತು 25, ನೆಲ್ಲಿಕುಂಜೆ ತೋಟ್ಟಂ ತರವಾಡಿನಲ್ಲಿ ಡಿ. 25 ಹಾಗೂ 26ರಂದು, ಕಾಸರಗೋಡು ನುಳ್ಳಿಪ್ಪಾಡಿ ತರವಾಡಿನಲ್ಲಿ ಡಿ. 27ಮತ್ತು 28, ಡಿ. 27 ಮತ್ತು 28 ರಂದು ಮಠತ್ತಿಲ್ ತರವಾಡು, 2026 ಜನವರಿ- 4 ಮತ್ತು 5ರಂದು ನೆಲ್ಲಿಕುಂಜೆ ಪುದಿಯಪುರೆ ತರವಾಡು, ಜ. 11ಮತ್ತು12ರಂದು ತಳಂಗರೆ ಪುಂಜಕೋಡಿ ದೊಡ್ಡಮನೆ ತರವಾಡು, 24ಮತ್ತು 25ರಂದು ಗೇಟ್ ಅಡುಕ್ಕಲ್ ತರವಾಡು, ಮತ್ತು ಜ.25ರಂದು ಅನವಾದುಕ್ಕಲ್ ಬಳಿಯ ದೊಡ್ಡಮನೆ ತರವಾಡು ಮರುತ್ತುಂ ದೈವ ಹಾಗೂ ಮಾ. 12ಮತ್ತು13ರಂದು ಪುತ್ತರಿಮಹೋತ್ಸವ ನಡೆಯಲಿರುವುದಾಗಿ ಶ್ರೀ ಭಗವತಿ ಸೇವಾ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಎನ್. ಸತೀಶ್, ಕಾರ್ಯದರ್ಶಿ ಗಣೇಶನ್ ಅಡ್ಕತ್ತಬೈಲ್ ಮತ್ತು ಕೋಶಾಧಿಕಾರಿ ರಾಜೇಶ್ ಅಡ್ಕತ್ತಬೈಲ್ ತಿಳಿಸಿದ್ದಾರೆ.




