ಕಾಸರಗೋಡು: 'ಮತದಾರರ ಪಟ್ಟಿ'ಯ ವಿಶೇಷ ತೀವ್ರ ಸುಧಾರಣಾ ಚಟುವಟಿಕೆಗಳಿಗೆ ಎಲ್ಲಾ ಮತದಾರರು ಸಹಕರಿಸುವ ಮೂಲಕ ಈ ಮಹಾಯಜ್ಞವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ತಮ್ಮ ಅಧಿಕೃತ ನಿವಾಸದಲ್ಲಿ ಕಾಸರಗೋಡು ಕ್ಷೇತ್ರದ ಮೊದಲ ಮತದಾರರಾಗಿ ಸಏರ್ಪಡೆಗೊಂಡ ನಂತರ ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿರುವ ಮತ್ತು 18 ವರ್ಷ ಪೂರೈಸಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು. ನಿಗದಿತ ದಾಖಲೆಗಳು ಮತ್ತು ನಿಗದಿತ ಸಮಯದ ವೇಳಾಪಟ್ಟಿಯನ್ನು ಅನುಸರಿಸುವ ಮೂಲಕ ನಾವು ಎಲ್ಲರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸಿದಲ್ಲಿ ತಾಂತ್ರಿಕ ಕಾರಣಗಳಿಂದ ಯಾವೊಬ್ಬ ಮತದರನೂ ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾಸರಗೋಡು ಕ್ಷೇತ್ರದ ಬೂತ್ 102ರ ಮತದಾರರಾಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರಿಗೆ ಬಿಎಲ್‍ಓ ಎ. ಪುಷ್ಪಾವತಿ ಅವರು ಗಣತಿ ನಮೂನೆಯನ್ನು ಹಸ್ತಾಂತರಿಸಿದರು. ಕಂದಾಯ ವಿಭಾಗೀಯ ಅಧಿಕಾರಿ ಬಿನು ಜೋಸೆಫ್, ಕಾಸರಗೋಡು ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ, ಮತ್ತು ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಕಂದಾಯ ವಿಭಾಗಾಧಿಕಾರಿ, ಹಿರಿಯ ಅಧೀಕ್ಷಕ ಪಿ. ಉದಯಕುಮಾರ್, ಕಿರಿಯ ಅಧೀಕ್ಷಕ ಎ. ರಾಜೀವನ್, ಮಾಸ್ಟರ್ ತರಬೇತುದಾರರಾದ ಎಂ.ಬಿ. ಲೋಕೇಶ್, ಬಿ. ಅಜಿತ್ ಕುಮಾರ್ ಮತ್ತು ಇತರರು ಭಾಗವಹಿಸಿದ್ದರು.





