ಕಾಸರಗೋಡು: ರಾಜ್ಯ ಚುನಾವಣಾ ಆಯೋಗವು ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡುವ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯನ್ನು ಕಾಸರಗೋಡು www.sec.kerala.gov.in ವೆಬ್‍ಸೈಟ್‍ನಲ್ಲಿ ಪರಿಶೀಲಿಸಬಹುದಾಗಿದೆ.
ರಾಜಕೀಯ ಪಕ್ಷಗಳಿಗೆ ನಾಲ್ಕು ವಿಧಗಳಾಗಿ ಚಿಹ್ನೆ ಹಂಚಿಕೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟ ಆರು ರಾಷ್ಟ್ರೀಯ ಪಕ್ಷಗಳನ್ನು ಪಟ್ಟಿ ಒಂದರಲ್ಲಿ ಮತ್ತು ಆರು ಕೇರಳ ರಾಜ್ಯ ಪಕ್ಷಗಳನ್ನು ಪಟ್ಟಿ ಎರಡರಲ್ಲಿ ಸೇರಿಸುವ ಮೂಲಕ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ. ಆ ಪಕ್ಷಗಳಿಗೆ ನೀಡಲಾಗುವ ಚಿಹ್ನೆಗಳು ಕೇಂದ್ರ ಚುನಾವಣಾ ಆಯೋಗದಿಂದ ಮಂಜೂರಾಗಿ ಲಭಿಸಿದವುಗಳಾಗಿವೆ. ಮೂರನೇ ಪಟ್ಟಿಯಲ್ಲಿ ಇತರ ರಾಜ್ಯಗಳಲ್ಲಿ ಮಾನ್ಯತೆ ಪಡೆದ ಪಕ್ಷಗಳು ಮತ್ತು ಕೇರಳ ವಿಧಾನಸಭೆ ಅಥವಾ ರಾಜ್ಯದ ಯಾವುದೇ ಸ್ಥಳೀಯಾಡಳಿತ ಸಂಸ್ಥೆಯಲ್ಲಿ ನೋಂದಾಯಿಸದ ಪಕ್ಷಗಳು ಒಳಗೊಂಡಿದೆ. ಸಂಸ್ಥೆಯಲ್ಲಿ ಸದಸ್ಯರನ್ನು ಹೊಂದಿರುವ ಮತ್ತು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ 28 ರಾಜಕೀಯ ಪಕ್ಷಗಳಿಗೆ ಈ ಚಿಹ್ನೆಯನ್ನು ನೀಡಲಾಗಿದೆ. ನಾಲ್ಕನೇ ಪಟ್ಟಿಯಲ್ಲಿರುವ 74 ಸ್ವತಂತ್ರ ಚಿಹ್ನೆಗಳಲ್ಲಿ, ಒಂದರಿಂದ ಮೂರರ ವರೆಗಿನ ಪಟ್ಟಿಯಲ್ಲಿ ಒಳಪಡದೇ ಇರುವ, ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳಿಗೆ ಆದ್ಯತೆಯ ಆಧಾರದ ಮೇಲೆ ಸ್ವತಂತ್ರ ಚಿಹ್ನೆಗಳನ್ನು ಹಂಚಲಾಗಿದೆ. ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಯಾವುದೇ ಇತರ ಪಕ್ಷ, ಅಭ್ಯರ್ಥಿಗಳಿಗೆ ಪಟ್ಟಿ 4 ರಿಂದ ಚಿಹ್ನೆಯನ್ನು ನೀಡಲಾಗುವುದು.
ಮೊದಲ ಪಟ್ಟಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಆಮ್ ಆದ್ಮಿ ಪಕ್ಷ (ಪೆÇರಕೆ), ಬಹುಜನ ಸಮಾಜ ಪಕ್ಷ (ಆನೆ), ಭಾರತೀಯ ಜನತಾ ಪಕ್ಷ (ಕಮಲ), ಭಾರತೀಯ ಕಮ್ಯುನಿಸ್ಟ್ ಪಕ್ಷ-ಮಾಕ್ರ್ಸವಾದಿ(ಕತ್ತಿ, ಸುತ್ತಿಗೆ, ನಕ್ಷತ್ರ), ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಹಸ್ತ) ಮತ್ತುಎರಡನೇ ಪಟ್ಟಿಯಲ್ಲಿ ಕೇರಳ ರಾಜ್ಯ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಕತ್ತಿ ತೆನೆ), ಜನತಾದಳ-ಜಾತ್ಯತೀತ (ತಲೆಯ ಮೇಲೆ ತೆನೆ ಹೊತ್ತ ಮಹಿಳೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಏಣಿ), ಕೇರಳ ಕಾಂಗ್ರೆಸ್-ಎಂ(ಎರಡು ಎಲೆಗಳು), ಕೇರಳ ಕಾಂಗ್ರೆಸ್ (ಆಟೋ ರಿಕ್ಷಾ), ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಮಣ್ಣಿನ ಮಡಕೆ, ಸೌಟು) ಗಳಿಗೂ ಚಿಹ್ನೆಗಳನ್ನು ಹಂಚಲಾಯಿತು.




