ನವದೆಹಲಿ: ಂ320 ವರ್ಗದ ವಿಮಾನಗಳಲ್ಲಿ ನಿಯಂತ್ರಣ ಸಂಬಂಧ ಸಂಭಾವ್ಯ ಸಮಸ್ಯೆ ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಇಂಡಿಗೊ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸುಮಾರು 200-250 ವಿಮಾನಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.
ತೀವ್ರ ಸೌರ ವಿಕಿರಣವು ಂ320 ವರ್ಗ ವಿಮಾನಗಳಲ್ಲಿ ಹಾರಾಟ ನಿಯಂತ್ರಣಗಳಿಗೆ ಸಂಬಂಧಿಸಿದ ನಿರ್ಣಾಯಕವಾದ ದತ್ತಾಂಶವನ್ನು ಹಾಳು ಮಾಡುವ ಸಾಧ್ಯತೆ ಇದೆ. ಇದನ್ನು ಸರಿಪಡಿಸಲು ಅಗತ್ಯವಿರುವ ಸಾಫ್ಟ್‌ವೇರ್ ಬದಲಾವಣೆ ಪ್ರಕ್ರಿಯೆಗಳು ವಿಮಾನ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಬಹುದು ಎಂದು ಏರ್‌ಬಸ್ ಶುಕ್ರವಾರ ತಿಳಿಸಿದೆ.
ದೇಶೀಯ ವಿಮಾನಯಾನ ಸಂಸ್ಥೆಗಳ ಒಡೆತನದಲ್ಲಿರುವ ಕಿರಿದಾದ ದೇಹ ಹೊಂದಿರುವ ಂ320 ವರ್ಗದ ವಿಮಾನಗಳು ಸಾಫ್ಟ್‌ವೇರ್ ಬದಲಾವಣೆ ಹಾಗೂ ಹಾರ್ಡ್‌ವೇರ್ ಮರುಜೋಡಣೆಗೆ ಒಳಗಾಗುವುದರಿಂದ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಬಹುದು ಎಂದು ಮೂಲಗಳು ತಿಳಿಸಿವೆ.
ಭಾರತದ ವಿಮಾನಯಾನ ಕಂಪನಿಗಳು ಸುಮಾರು 560 ಂ320 ವರ್ಗದ ವಿಮಾನಗಳನ್ನು ಹೊಂದಿವೆ. ಅವುಗಳಲ್ಲಿ ಸುಮಾರು 200-250 ವಿಮಾನಗಳಿಗೆ ಸಾಫ್ಟ್‌ವೇರ್ ಬದಲಾವಣೆ ಅಥವಾ ಹಾರ್ಡ್‌ವೇರ್ ಮರುಜೋಡಣೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.




