ಕಾಸರಗೋಡು: ವಿಧಾನಸಭಾ ಕ್ರೇತ್ರದಲ್ಲಿ ಸ್ಪೆಷಲ್ ಇಂಟೆನ್ಸಿವ್ ರಿವಿಶನ್(ಎಸ್‍ಐಆರ್) ಭಾಗವಾಗಿ ಪದ್ಮಶ್ರೀ ಪುರಸ್ಕøತ ಶ್ರೀ ಸತ್ಯನಾರಾಯಣ ಬೆಳೇರಿ ಅವರಿಗೆ ಗಣತಿ ನಮೂನೆ (ಎನ್ಯುಮರೇಶನ್ ಫಾರ್ಮ್)ಯನ್ನು ಬೂತ್ ಲೆವೆಲ್ ಆಫೀಸರ್ ಕರುಣಾಕರ ಪೂಜಾರಿ ಹಸ್ತಾಂತರಿಸಿದರು.
ಕಾಸರಗೋಡು ಚುನಾವಣಾ ನೋಂದಾವಣಾ ಅಧಿಕಾರಿ ಬಿನು ಜೋಸೆಫ್, ಸೀನಿಯರ್ ಸುಪರಿಟಿಡೆಂಟ್ ಪಿ. ಉದಯಕುಮಾರ್ , ಎಸ್ ಆರ್ ಐ ಟ್ರೈನರ್ ಡೆಪ್ಯೂಟಿ ತಹಸಿಲ್ದಾರ್ ಲೋಕೇಶ್ ಎಂ.ಬಿ, ಜೂನಿಯರ್ ಸುಪರಿಟಿಡೆಂಟ್ ಚಂದ್ರಶೇಖರ, ಗ್ರಾಮಾಧಿಕಾರಿ ಲೀಲಾವತಿ, ವಿವಿಧ ರಾಜಕೀಯ ಪಕ್ಷದ ಬಿ ಎಲ್ ಎ ಗಳಾದ ಎನ್. ಹೆಚ್.ಮೊಹಮ್ಮದ್, ಇಬ್ರಾಹಿಂ, ಪ್ರದೀಪ್ ಕುಮಾರ್ ಪಿ, ರಾಮಚಂದ್ರ ಆಚಾರ್ಯ, ಹರಿರಾಜ್ ಎ ಉಪಸ್ಥಿತರಿದ್ದರು.





