ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬೂತ್ ಲೆವೆಲ್ ಆಫೀಸರ್ ಜವಾಬ್ದಾರಿಯಿಂದಾಗಿ ತೆರವಾದ ಅಧ್ಯಾಪಕ ಹುದ್ದೆಗೆ ದಿನ ವೇತನ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸಂದರ್ಶನ ಶಾಲಾ ಕಚೇರಿಯಲ್ಲಿ ನ. 12 ರಂದು ಬುಧವಾರ ಪೂರ್ವಾಹ್ಣ 11.30.ರಿಂದ ಎಚ್.ಎಸ್.ಟಿ.ಸಮಾಜ ವಿಜ್ಞಾನ(ಬಿ.ಎ., ಬಿ.ಇಡಿ, ಕೆ-ಟೆಟ್) ಹುದ್ದೆಗೆ ಸಂದರ್ಶನ ನಡೆಯಲಿದೆ. ಆಸಕ್ತರು ಸರಿಯಾದ ದಾಖಲೆಗಳೊಂದಿಗೆ ಕ್ಲಪ್ತ ಸಮಯಕ್ಕೆ ಹಾಜರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗೆ ಶಾಲಾ ಪ್ರಬಂಧಕ 9446283131 ರ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.




