ಕಾಸರಗೋಡು: ಜಿಲ್ಲೆಯ ವಡಕ್ಕುಂಬಾಡ್ ಚಾರ್ವಾಕ ನಿವಾಸಿ, ಕೇರಳ ಯುಕ್ತಿವಾದ ಸಂಘ ಕಾಸರಗೋಡು ಜಿಲ್ಲಾ ಸಮಿತಿ ಉಪಾಧ್ಯಕ್ಷೆ, ಸಿಪಿಎಂ ವಡಕ್ಕುಂಬಾಡ್ ಶಾಖಾ ಸಮಿತಿ ಸದಸ್ಯೆ ಎಂ. ಸಾವಿತ್ರಿ(56) ನಿಧನರಾದರು. ಅವರು ಕೇರಳ ಯುಕ್ತಿವಾದ ಸಂಘ ರಾಜ್ಯ ಸಮಿತಿ ಸದಸ್ಯ ವಿದ್ಯಾಧರನ್ ಅವರ ಪತ್ನಿ. ಇವರುಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಸಾವಿತ್ರಿ ಅವರ ಮೃತದೇಹ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಹಸ್ತಾಂತರಿಸುವುದಾಗಿ ಸಾವಿತ್ರಿ ಮನೆಯವರು ತಿಳಿಸಿದ್ದಾರೆ.




