ಕಾಸರಗೋಡು: ಆಡು ಸಾಕಾಣಿಕೆ ಬಗ್ಗೆ ತರಬೇತಿ ಕಣ್ಣೂರಿನ ಪಶುಸಂಗೋಪನಾ ತರಬೇತಿ ಕೇಂದ್ರದಲ್ಲಿ ನವೆಂಬರ್ 21 ಮತ್ತು 22 ರಂದು ಬೆಳಿಗ್ಗೆ 10ರಿಂದ ರಿಂದ ಸಂಜೆ 5 ರವರೆಗೆ ನಡೆಯಲಿದೆ. ಆಡು ಸಾಕಣೆ ವಿಷಯದ ಕುರಿತು ತರಬೇತಿ ಹಾಗೂ ತರಗತಿಯನ್ನು ಆಯೋಜಿಸಲಾಗುತ್ತಿದ್ದು, ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು ನ. 20 ರಂದು ಸಂಜೆ 4 ಗಂಟೆಯೊಳಗೆ ತರಬೇತಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ(0497-2763473)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




