ಕಾಸರಗೋಡು: ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಸರಳ ಮತ್ತು ಪಾರದರ್ಶಕ ಪ್ರಕ್ರಿಯೆಯಾಗಿದ್ದು, ರಾಜಕೀಯ ಪಕ್ಷಗಳು ಸಹ ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡಬಹುದು ಎಂದು ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಐಎಎಸ್ ಹೇಳಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್, ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಟಿ. ಅನೀಶ್, ಚುನಾವಣಾ ನೋಂದಣಿ ಅಧಿಕಾರಿಗಳಾದ ಬಿನು ಜೋಸೆಫ್, ಕೆ. ಬಾಲಗೋಪಾಲನ್, ಕೆ. ಅಜೇಶ್, ವಿ. ಪಿ. ರಘು ಮಣಿ, ಎಂ.ರಮೀಸ್ ರಾಜಾ, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಾದ ಪಿ.ವಿ.ಮುರಳಿ, ಎ.ಸುರೇಶ್ ಕುಮಾರ್, ಜಿ.ಸುರೇಶ್ ಬಾಬು, ಪಿ.ಸಜಿತ್, ಕೆ.ರಮೇಶನ್, ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ.ಎನ್.ಗೋಪಕುಮಾರ್, ಕಲೆಕ್ಟರೇಟ್ ಚುನಾವಣಾ ವಿಭಾಗದಜೂನಿಯರ್ ಸೂಪರಿಂಟೆಂಡೆಂಟ್ ಎ ರಾಜೀವನ್ ಮತ್ತು ಚುನಾವಣಾ ಇಲಾಖೆಯ ಗುಮಾಸ್ತ ಪಿ.ಜಿ. ಬಿನು ಕುಮಾರ್ ಉಪಸ್ಥಿತರಿದ್ದರು.





