ಕಾಸರಗೋಡು : ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ 2025ನೇ ಸಾಲಿನ ಎಕ್ಸೆಲ್ ಅಕ್ಷರೋತ್ಸವ ನಾಡು- ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾಸರಗೋಡಿನ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿರಾಜ್ ಅಡೂರು ಅವರು ರಚಿಸಿದ ಕವನವನ್ನು ಕಾಲೇಜಿನ ಉಪನ್ಯಾಸಕಿ ಅನೂಷಾ ಅವರು ಸಂಗೀತ ಸಂಯೋಜನೆಯೊಂದಿಗೆ ಹಾಡಿದರು. ಈ ಹಾಡಿಗೆ ಕಾಲೇಜಿನ ಉಪನ್ಯಾಸಕರಾದ ರಘು ಮಾಸ್ತರ್ ಅವರ ನೃತ್ಯ ನಿರ್ದೇಶನದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ತಬಲಾವಾದನದಲ್ಲಿ ವಿವೇಕ್ ಬಾಳಿಗ, ಕೀಬೋರ್ಡಿನಲ್ಲಿ ಕಮಲಾಕ್ಷ ಗುಡಿಗಾರ್ ಭಾಗವಹಿಸಿದ್ದರು. ಕಾಲೇಜಿನ ಕನ್ನಡ ಉಪನ್ಯಾಸಕರಾದ ಚರಣ್ ಕುಮಾರ್, ಸಂಜೀವ ಕೊಡಗು ಮೊದಲಾದವರು ಸಹಕರಿಸಿದ್ದರು. ಕಾರ್ಯಕ್ರಮದಲ್ಲಿ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ ಸುಮಂತ್ ಕುಮಾರ ಜೈನ್, ವಿದ್ಯಾಸಾಗರ ಕ್ಯಾಂಪಸ್ ಪ್ರಾಂಶುಪಾಲ ಡಾ. ನವೀನ ಕುಮಾರ ಮರಿಕೆ, ಅರಮಲೆ ಬೆಟ್ಟ ಕ್ಯಾಂಪಸ್ ಪ್ರಾಂಶುಪಾಲ ಡಾ. ಪ್ರಜ್ವಲ್ ಕಜೆ ಮೊದಲಾದವರು ಉಪಸ್ಥಿತರಿದ್ದರು.




