ಕಾಸರಗೋಡು: ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಸಾಮಗ್ರ ವಿತರಣಾ ಮತ್ತು ಸ್ವೀಕೃತಿ ಕೇಂದ್ರಗಳನ್ನು ನಿರ್ಧರಿಸಲಾಗಿದೆ. ಕಾಸರಗೋಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಮ್ನಾಡು, ಚೆಂಗಳ, ಬದಿಯಡ್ಕ ಗ್ರಾಮ ಪಂಚಾಯಿತಿಗಳಿಗೆ ಕಾಸರಗೋಡು ವಿದ್ಯಾನಗರ ಸರ್ಕಾರಿ ಕಾಲೇಜಿನ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿರುವ ಮುಖ್ಯ ಕಟ್ಟಡದ ನೆಲ ಮಹಡಿ ಮತ್ತು ಇತರ ಪೂರಕ ಕಟ್ಟಡಗಳನ್ನು ಚುನಾವಣಾ ಪರಿಕರಗಳ ವಿತರಣೆ ಮತ್ತು ಸ್ವೀಕೃತಿ ಕೇಂದ್ರಗಳಾಗಿ ಹಂಚಿಕೆ ಮಾಡಲಾಗಿದೆ.
ಕಾಞಂಗಾಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಾದ ಅಜನೂರು, ಮಡಿಕೈ, ಪಳ್ಳಿಕ್ಕರ, ಪುಲ್ಲೂರು ಪೆರಿಯ, ಉದುಮ ಗ್ರಾಮ ಪಂಚಾಯಿತಿಗಳಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾರಡ್ಕ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಕುಂಬ್ಡಾಜೆ, ಬೆಳ್ಳೂರು, ದೇಲಂಪಾಡಿ, ಕಾರಡ್ಕ ಮುಳಿಯಾರ್, ಕುತ್ತಿಕೋಲ್, ಬೇಡಡ್ಕ ಗ್ರಾಮ ಪಂಚಾಯಿತಿಗಳಿಗೆ ಬೋವಿಕಾನದ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯನ್ನು ನಿಗದಿಪಡಿಸಲಾಗಿದೆ.
ಮಂಜೇಶ್ವರಂ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಮಂಗಲ್ಪಾಡಿ, ವರ್ಕಾಡಿ, ಪುತ್ತಿಗೆ, ಮೀಂಜ, ಮಂಜೇಶ್ವರ, ಪೈವಳಿಕೆ, ಎಣ್ಮಕಜೆ ಗ್ರಾಮ ಪಂಚಾಯಿತಿಗಳಿಗೆ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ನೀಲೇಶ್ವರ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಕಯ್ಯೂರು ಚೀಮೇನಿ, ಪಿಲಿಕೋಡ್, ಚೆರುವತ್ತೂರು, ತ್ರಿಕರಿಪುರ, ಪಡನ್ನ, ವಲಿಯಪರಂಬ ಗ್ರಾಮ ಪಂಚಾಯಿತಿಗಳಿಗೆ ಪಡನ್ನಕ್ಕಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು, ಪರಪ್ಪ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಕೋಡೋಂ ಬೇಲೂರು, ಕಳ್ಳಾರ್, ಪನತ್ತಡಿ, ಬಳಾಲ್, ಕಿನನೂರ್-ಕರಿಂದಳಂ, ವೆಸ್ಟ್ ಎಳೇರಿ, ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿಗಳಿಗೆ ಪರಪ್ಪ ಜಿಎಚ್‍ಎಸ್‍ಎಸ್ ಕೇಂದ್ರದಿಂದ ಚುನಾವಣಾ ಸಾಮಗ್ರಿ ವಿತರಣೆ ಮತ್ತು ಸ್ವೀಕೃತಿ ನಡೆಯಲಿದೆ.
ಕಾಂಞಂಗಾಡ್ ನಗರಸಭೆಗೆ ಹೊಸದುರ್ಗದ ಜಿಎಚ್‍ಎಸ್‍ಎಸ್, ನೀಲೇಶ್ವರಂ ನಗರಸಭೆಗೆ ನೀಲೇಶ್ವರದ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಸರಗೋಡು ನಗರಸಭೆಗೆ ಕಾಸರಗೋಡು ಸರ್ಕಾರಿ ಕಾಲೇಜನ್ನು ವಿತರಣಾ ಮತ್ತು ಸವೀಕೃತಿ ಕೇಂದ್ರಗಳನ್ನಾಗಿ ಗುರುತಿಸಲಗಿದೆ.




