ಕಾಸರಗೋಡು: ವಿವಿಧ ಸಾಮಾಜಿಕ ಸಾಂಸ್ಕøತಿಕ ಶೈಕ್ಷಣಿಕ ಕನ್ನಡ ಕಾರ್ಯಕ್ರಮ, ಕಾನೂನು ಕಾರ್ಯಕ್ರಮ ಆಯೋಜನೆ, ಸಂಘಟಕ ಮತ್ತು ಗಾಯನ ಕ್ಷೇತ್ರದಲ್ಲಿ ನಿರಂತರ 12 ಗಂಟೆಗಳ ಕಾಲ ಹಾಡುವ ಮೂಲಕ ದಾಖಲೆ ಮಾಡಿರುವ ಗಂಗಾಧರ್ ಗಾಂಧಿ ಅವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2025 ಪ್ರಧಾನ ಮಾಡಲಾಯಿತು.
ಕಾಸರಗೋಡಿನ ಪಾರೆಕಟ್ಟದಲ್ಲಿ ಕನ್ನಡ ಗ್ರಾಮವನ್ನು ಕಟ್ಟಿಬೆಳೆಸಿ ಕನ್ನಡ ಭಾಷೆ ಕನ್ನಡದ ಅನನ್ಯತೆ ಕನ್ನಡದ ಅಸ್ಮಿತೆ ಕುರಿತು ಕಳೆದ 40 ವರ್ಷಗಳಿಂದ ನಿರಂತರ ಕಾರ್ಯಕ್ರಮ ನಡೆಸಿ, ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ 60ನೇ ಹುಟ್ಟುಹಬ್ಬ ಸಂದರ್ಭ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿಡಿ ಗ್ವರವಿಸಲಾಗಿದೆ..
ಗಂಗಾಧರ್ ಗಾಂಧಿ ಅವರನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಾಲು ಹೊದಿಸಿ, ಹಾರ ಹಕ್ಕಿ ಪೇಟ ತೊಡಿಸಿ ಅಭಿನಂದನ ಪಲಕ ನೀಡಿ ಆಶೀರ್ವದಿಸಿದರು. ಈ ಸಂದರ್ಭ ಡಾ. ವೆಂಕಟ್ರಮಣ ಹೊಳ್ಳ, ಕಾರ್ಯಕ್ರಮದ ರೂವಾರಿ ಶಿವರಾಮ ಕಾಸರಗೋಡು, ಶಿಕ್ಷಕಿ, ಕವಯಾತ್ರಿ ರೇಖಾ ಸುದೇಶ್ ರಾವ್, ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.





