ಕಾಸರಗೋಡು: ಪಾಣತ್ತೂರು ಕಲ್ಲಪಳ್ಳಿ ಹಾಗೂ ಮಾಣಿಮೂಲೆಯಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಮರ ಕಡಿಯುವ ಮಧ್ಯೆ ರೆಂಬೆ ಮೈಮೇಲೆ ಬಿದ್ದು, ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಕಳ್ಳಾರ್ ಪೂತತ್ತಾನ್ ಮೂಲೆ ನಿವಾಸಿ ಶಂಕರನ್(55) ಹಾಗೂ ಬಂದಡ್ಕ ಮಾಣಿಮೂಲೆ ನಿವಾಸಿ ಬಾಬು ನಾಯ್ಕ್(80) ಮೃತಪಟ್ಟವರು.
ಪಾಣತ್ತೂರು ಕಲ್ಲಪಳ್ಳಿಯಲ್ಲಿ ಮರದ ರೆಂಬೆ ಕಡಿಯುವ ಮಧ್ಯೆ ಶಂಕರನ್ ಅವರ ಮೈಮೇಲೆ ಬಿದ್ದ ಪರಿಣಾಂ ಗಂಭೀರ ಗಾಯಗೊಂಡ ಇವರನ್ನು ಪಾಣತ್ತೂರಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ದುರಂತದಲ್ಲಿ ಮನೆ ಸನಿಹ ಇದ್ದ ಮರದ ರೆಂಬೆ ಕಡಿಯುವ ಮಧ್ಯೆ, ಅಡಕೆ ಮರದಲ್ಲಿ ಸಿಲುಕಿಕೊಂಡ ರೆಂಬೆಯನ್ನು ತೆರವುಗೊಳಿಸುತ್ತಿದ್ದಂತೆ ತಲೆಗೆ ಬಿದ್ದು, ಗಂಭೀರ ಗಾಯಗೊಂಡ ಇವರನ್ನು ಇಂದಿರಾನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




