ಉಪ್ಪಳ: ಉಪ್ಪಳ ಹಿದಾಯತ್‍ಬಜಾರ್ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ಅಪರಿಚಿತರು ಗುಂಡುಹಾರಾಟ ನಡೆಸಿದ್ದು ಆತಂಕದ ವಾತಾವರಣಕ್ಕೆ ಕಾರಣವಾಗಿದೆ. ಶನಿವಾರ ತಡರಾತ್ರಿ ಗುಂಡು ಹಾರಾಟ ನಡೆದಿದ್ದು, ಮನೆಯ ಕಿಟಿಕಿಬಾಗಿಲು ಪುಡಿಯಾಗಿದೆ.
ಅಬೂಬಕ್ಕರ್ ವಿದೇಶದಲ್ಲಿದ್ದು,ಪತ್ನಿಮತ್ತು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿದ್ದವರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಕಾರಿನಲ್ಲಿ ಆಗಮಿಸಿದ ಆಗಂತುಕರು ಗುಂಡುಹಾರಾಟ ನಡೆಸಿ, ತಕ್ಷಣ ಪರಾರಿಯಾಗಿರುವುದಾಗಿ ಮಾಹಿತಿಯಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅದಿಕಾರಿಗಳು ಭೇಟಿ ನೀಡಿ ತಪಸಣೆ ನಡೆಸಿದ್ದಾರೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




