HEALTH TIPS

ವಿಕಸಿತ ಬದಿಯಡ್ಕಕ್ಕಾಗಿ ಬಿಜೆಪಿ ಅಧಿಕಾರಕ್ಕೆ - ಗೋಪಾಲಕೃಷ್ಣ ಮುಂಡೋಳುಮೂಲೆ-ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಒಂದನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬದಿಯಡ್ಕ: ವಾರ್ಡು ವಿಭಜನೆಯ ನಂತರ ಬದಿಯಡ್ಕದಲ್ಲಿ ಬದಲಾವಣೆ ಆಗಬೇಕಿದೆ. 25 ವರ್ಷಗಳ ಯುಡಿಎಫ್ ಆಡಳಿತವನ್ನು ಕೊನೆಗಾಣಿಸಲು ಬಿಜೆಪಿ ಸೇನಾನಿಗಳು ಸಜ್ಜಾಗಿದ್ದಾರೆ. ವಿಕಸಿತ ಬದಿಯಡ್ಕಕ್ಕೆ ನಾಡಿನ ಮತದಾರರು ಬಿಜೆಪಿಗೆ ಅವಕಾಶವನ್ನು ನೀಡಿ ಎಂದು ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಹೇಳಿದರು.

ಬದಿಯಡ್ಕ ಗ್ರಾ. ಪಂ. ನಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿರುವ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಜಯರಾಮ ಚೆಟ್ಟಿಯಾರ್ ಬದಿಯಡ್ಕ ಅಧ್ಯಕ್ಷತೆ ವಹಿಸಿ ಪಕ್ಷದ ಅಭ್ಯರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು. ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಪ್ರಮುಖರಾದ ಹರೀಶ್ ನಾರಂಪಾಡಿ, ಅಶ್ವಿನಿ ನೀರ್ಚಾಲು, ರವೀಂದ್ರ ರೈ ಗೋಸಾಡ, ಡಿ.ಶಂಕರ, ಬಾಲಕೃಷ್ಣ ಶೆಟ್ಟಿ ಕಡಾರು ಮಾತನಾಡಿದರು. ಹಿರಿಯರಾದ ರಂಗನಾಥ ಕುಂಡಡ್ಕ ಅಭ್ಯರ್ಥಿಗಳಿಗೆ ಶಾಲು ಹಾಕಿ ಅಭಿನಂದಿಸಿದರು. 

ವಾರ್ಡು 2 ಕಿಳಿಂಗಾರು- ಡಿ. ಶಂಕರ, ವಾರ್ಡು 3 ನೀರ್ಚಾಲು- ಶ್ಯಾಮಪ್ರಸಾದ ಸರಳಿ, ವಾರ್ಡು 5 ಮೂಕಂಪಾರೆ -ಸುನಿಲ್ ಕಿನ್ನಿಮಾಣಿ, ವಾರ್ಡು 6 ಕಾಡಮನೆ ಅವಿನಾಶ್ ರೈ, ವಾರ್ಡು 7 ಪಳ್ಳತ್ತಡ್ಕ ಜಯಂತಿ ಕುಂಟಿಕಾನ, ವಾರ್ಡು 8 ಮೆಡಿಕಲ್ ಕಾಲೇಜು- ಉಷಾ ಕೆ, ವಾರ್ಡು 9 ಚಾಲಕ್ಕೋಡು- ಮಧುಸೂದನ, ವಾರ್ಡು 10 ವಿದ್ಯಾಗಿರಿ- ಬಾಲಕೃಷ್ಣ ಶೆಟ್ಟಿ, ವಾರ್ಡು 11 ಬಾರಡ್ಕ ಜಗದಂಬಾ, ವಾರ್ಡು 12 ಬದಿಯಡ್ಕ ಸುರೇಖ, ವಾರ್ಡು 14 ಕನ್ಯಪಾಡಿ ಆನಂದ ಕೆ, ವಾರ್ಡು 16 ಚರ್ಲಡ್ಕ- ತುಳಸಿ, ವಾರ್ಡು 18 ಪುದುಕೋಳಿ -ರಜನಿ ಸಂದೀಪ್, ವಾರ್ಡು 20 ಬೇಳ ಪ್ರೇಮ ಕುಮಾರಿ, ವಾರ್ಡು 21 ಸೀತಾಂಗೋಳಿ ರೋಮನ್ ಡಿ ಸೋಜ ಇವರನ್ನು ಅಭ್ಯರ್ಥಿಗಳೆಂದು ಘೋಷಿಸಲಾಗಿದೆ. ಆನಂದ ಕೆ.ಸ್ವಾಗತಿಸಿ, ಬಾಲಗೋಪಾಲ ಏಣಿಯರ್ಪು ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries