ಕೊಲಂಬೊ: ಭಾರತದ ಯುದ್ಧವಿಮಾನ ವಾಹಕನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಶ್ರೀಲಂಕಾದ ಪ್ರವಾಹ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 30ರಂದು ಅಂತರರಾಷ್ಟ್ರೀಯ ನೌಕಾ ಸಮರಾಭ್ಯಾಸ-2025 ನಡೆಯಲಿದ್ದು, ಇದರ ತರಬೇತಿ ಭಾಗವಾಗಿ ಸದ್ಯ ಐಎನ್‌ಎಸ್ ವಿಕ್ರಾಂತ್ ಕೊಲಂಬೊ ಬಂದರನಲ್ಲೇ ಇದೆ.
ಈ ನೌಕೆಯನ್ನು ಪೂರ್ವ ಕರಾವಳಿಯ ಟ್ರೆಂಕೊಮಾಲಿ ಪ್ರದೇಶದಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು ಎಂದು ಶ್ರೀಲಂಕಾದ ನೌಕಾಪಡೆ ತಿಳಿಸಿದೆ.




