ಕಾಸರಗೋಡು: ಆಪರೇಷನ್ ರಕ್ಷಿತ ಯೋಜನೆ ಅಂಗವಾಗಿ ಕೇರಳ ರೈಲ್ವೆ ಪೆÇಲೀಸ್ ಅಧೀಕ್ಷಕರ ಸೂಚನೆಗಳ ಪ್ರಕಾರ ಕಾಸರಗೋಡು ರೈಲ್ವೆ ಪೆÇಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಸನಿಲ್ ಕುಮಾರ್ ಸಿ.ಎಸ್ ಮತ್ತು ಎಎಸ್‍ಐ ವೇಣುಗೋಪಾಲ್ ಅವರನ್ನು ನಿಯೋಜಿಸಲಾಗಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗದೆ.
ಪಿ.ಕೆ., ಮಹೇಶ್ ಸಿ.ಕೆ., ಹಿರಿಯ ನಾಗರಿಕ ಪೆÇಲೀಸ್ ಅಧಿಕಾರಿ ಸುಧೀಶ್ ಕುಮಾರ್, ನಾಗರಿಕ ಪೆÇಲೀಸ್ ಅಧಿಕಾರಿ ಮತ್ತು ಗುಪ್ತಚರ ಅಧಿಕಾರಿ ಜ್ಯೋತಿಷ್ ಜೋಸ್, ಕಾಸರಗೋಡು ರೈಲ್ವೆ ರಕ್ಷಣಾ ಪಡೆಯ ಇನ್ಸ್‍ಪೆಕ್ಟರ್ ಶಶಿ, ಸಬ್ ಇನ್‍ಸ್ಪೆಕ್ಟರ್ ವಿನೋದ್, ಕಾಸರಗೋಡು ರೈಲು ನಿಲ್ದಾಣಕ್ಕೆ ಆಗಮಿಸುವ ವಿವಿಧ ರೈಲುಗಳ ಮಹಿಳಾ ಬೋಗಿಗಳು ಮತ್ತು ಸಾಮಾನ್ಯ ಬೋಗಿಗಳಲ್ಲಿ ರೈಲು ಪ್ರಯಾಣದ ಕಾಲಾವಧಿಯಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಕಾರ್ಯಚರಣೆ ನಡೆಸಿದರು. ಮಹಿಳಾ ಪ್ರಯಾಣಿಕರಿಗೆ ಉಪಟಳ ನೀಡುವವರು, ಮದ್ಯಪಾನಿಗಳ ವಿರುದ್ಧ ಕಾರ್ಯಾಚರಣೆಯನ್ನೂ ವಿಶೇಷ ತಂಡ ಕೈಗೊಳ್ಳುತ್ತಿದೆ. ಬ್ರೆತ್ ಅನಲೈಸರ್ ಮೂಲಕ ಮದ್ಯಪಾನಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲೂ ತಮಡ ಸಕ್ರಿಯವಾಗಿದೆ.
ಮುನ್ನೆಚ್ಚರಿಕೆಯನ್ವಯ ಕೇರಳ ರೈಲ್ವೆ ಪೆÇಲೀಸ್ ನಿಯಂತ್ರಣ ಕೊಠಡಿ ಸಂಖ್ಯೆಗಳು, ತುರ್ತು ಪ್ರತಿಕ್ರಿಯೆ ಸಂಖ್ಯೆಗಳಾದ 112 ಮತ್ತು 139, ಮತ್ತು 'ರೈಲ್ ಮದದ್' ಅಪ್ಲಿಕೇಶನ್, ಪೊಲೀಸ್ ಕಂಟ್ರೋಲ್ ರೂಮ್ ನಂಬರ್(9846200100)ಗಳ ಬಗ್ಗೆ ಪ್ರಯಾಣಿಕರಿಗೆ ವಿವರಿಸುವ ಮೂಲಕ ಅಗತ್ಯ ಜಾಗೃತಿ ಮೂಡಿಸಲಾಯಿತು.





