ಕಾಸರಗೋಡು: ಜಿಲ್ಲೆಯಲ್ಲಿ ಸಣ್ಣ ಉದ್ದಿಮೆ, ಮಹಿಳಾ ಉದ್ಯಮಿಗಳು ಮತ್ತು ಕಲಾವಿದರನ್ನು ಉತ್ತೇಜಿಸುವ ಮತ್ತು ಅವರಿಗೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಕಾಸರಗೋಡು ಯುವ ಸಮೂಹವು ಆಯೋಜಿಸುವ ಉತ್ಸವ"ಪ್ಲೀ'ನವೆಂಬರ್ 21ರಿಂದ 23ರ ವರೆಗೆ ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಸ್ಪೀಡ್‍ವೇ ಮೈದಾನದಲ್ಲಿ ನಡೆಯಲಿರುವುದಾಗಿ ಸಂಘಟಕ ಖಾಲಿದ್ ಶಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
21 ಮತ್ತು 22 ರಂದು ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ಮತ್ತು 23 ರಂದು ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. 23ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕಿ ಮತ್ತು ಬ್ಲಾಗರ್ ಹನನ್ ಶಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಕಲಾವಿದರಿಂದ ಒಪ್ಪನ, ಕೈಕೊಟ್ಟು ಕಳಿ, ಸಿನಿಮ್ಯಾಟಿಕ್ ಡ್ಯಾನ್ಸ್, ರ್ಯಾಪ್ ಹಾಡು ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯುವುದು. 60ಕ್ಕೂ ಹೆಚ್ಚು ಆಹಾರ ಮತ್ತು ಬಟ್ಟೆ ಮಳಿಗೆಗಳು ಸೇರಿದಂತೆ ವಿವಿಧ ಕಲಾತ್ಮಕ ಪ್ರದರ್ಶನಗಳನ್ನು ಒಳಗೊಂಡಿರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೌಫಲ್ ಎ.ಕೆ, ಶಹಾಜ್ ಮಂತೋಟನ್, ನವಲ್ ಬಿ.ಕೆ ಮತ್ತು ನಸೀಬಾ ಉಪಸ್ಥಿತರಿದ್ದರು.




